BREAKFAST | ಉಪ್ಪಿಟ್ಟು ಅಂದ್ರೆ ಮುಖ ಮುರಿಯುವವರೂ ಒಮ್ಮೆ ಟ್ರೈ ಮಾಡಿ ಈ ವಿಶೇಷ ಉಪ್ಪಿಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಉಪ್ಪಿಟ್ಟು ಅಂದ್ರೆ ಹಲವರಿಗೆ ಇಷ್ಟಾನೆ ಆಗೋದಿಲ್ಲಾ.. ಅದರಲ್ಲೂ ಈ ದಿನ ಬ್ರೇಕ್‌ಫಾಸ್ಟ್ ಉಪ್ಪಿಟ್ಟು ಅಂದ್ರೆ ಬೈದುಕೊಂಡು ಇಡೀ ದಿನ ಉಪವಾಸ ಇದ್ದು ಬಿಡ್ತೇವೆ ಎನ್ನುವವರೇ ಹೆಚ್ಚು. ನಿಜ ಹೇಳಬೇಕೆಂದ್ರೆ ಒಮ್ಮೆ ಈ ವಿಶೇಷವಾದ ಉಪ್ಪಿಟ್ಟನ್ನು ಟ್ರೈ ಮಾಡಿ, ಆಗ ನೀವೆ ಹೇಳ್ತೀರಾ ಉಪ್ಪಿಟ್ಟು ನನ್‌ ಫೇವರಿಟ್ಟು ಅಂತ…

ಬೇಕಾಗುವ ಸಾಮಗ್ರಿಗಳು :

* ಸೂಜಿ ರವೆ ( ಬಾಂಬೆ ರವೆ)
* ಅವರೆಕಾಳು
* ಬಟಾಣಿ
* ಟೊಮೆಟೊ
* ಈರುಳ್ಳಿ
* ಹಸಿ ಮೆಣಸು
* ಆಲೂಗಡ್ಡೆ (ತೆಳುವಾಗಿ ಕತ್ತರಿಸಿ)
* ಚಮಚ ಎಣ್ಣೆ/ತುಪ್ಪ
* ಕರಿಬೇವು
* ಚಮಚ ಉದ್ದು
* ಅರಿಶಿಣ ಹುಡಿ
* ಉಪ್ಪು

ಮಾಡುವ ವಿಧಾನ :
* ಮೊದಲು ರವೆಯನ್ನು ಹುರಿಯಿರಿ.
* ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಉದ್ದಿನ ಬೇಳೆ
* ಈಗ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
* ನಂತರ ಬಟಾಣಿ, ಅವರೆಕಾಳು, ಆಲೂಗಡ್ಡೆ ಹಾಕಿ ಫ್ರೈ ಮಾಡಿ.
* ಹೆಚ್ಚಿದ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ.
* ಅದಕ್ಕೆ ಈಗ ನೀರು ಹಾಕಿ ತರಕಾರಿ ಬೇಯಿಸಿ.
* ತರಕಾರಿ ಬೆಂದ ಮೇಲೆ ರವೆಯನ್ನು ನಿಧಾನಕ್ಕೆ ಉದುರಿಸಿ, ಹೀಗೆ ಉದುರಿಸುವಾಗ ಗಂಟಾಗದಂತೆ ನೋಡಿಕೊಳ್ಳಿ

ಈಗ ಬಿಸಿಬಿಸಿಯಾದ ರುಚಿಯಾದ ವಿಶೇಷವಾದ ಉಪ್ಪಿಟ್ಟು ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!