ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಮಂದಿ ಕೇಕ್ ಅಂದ್ರೆ ಇಷ್ಟ ಪಡೋದಿಲ್ಲ. ಅದರಲ್ಲಿ ಮೊಟ್ಟೆ ಹಾಕಿರ್ತಾರೆ ಅಂತ ತಿನ್ನೋಕೆ ಹಿಂದೇಟು ಹಾಕ್ತಾರೆ. ಅಂತವರೂ ಕೂಡ ಈ ಕೇಕ್ ಅನ್ನು ತಿಂದ್ರೆ ಮತ್ತೆ ತಿನ್ನಬೇಕು ಎನಿಸುತ್ತದೆ. ಹಾಗಾದ್ರೆ ಮತ್ಯಾಕೆ ತಡ ಟ್ರೈ ಮಾಡಿ ನೋಡಿ ಸ್ಟ್ರಾಬೆರಿ ಕೇಕ್.
ಬೇಕಾಗುವ ಸಾಮಾಗ್ರಿಗಳು:
*ಸ್ಟ್ರಾಬೆರಿ ಹಣ್ಣು
*ಮೊಟ್ಟೆ
*ಮೈದಾ ಹಿಟ್ಟು
*ಸಕ್ಕರೆ
*ಮೊಸರು
*ಬೆಣ್ಣೆ
*ಕೋಕೋ ಪುಡಿ
*ಅಡುಗೆ ಸೋಡಾ
*ವೆನಿಲ್ಲಾ ಎಸೆನ್ಸ್
*ಬೇಕಿಂಗ್ ಪೌಡರ್
*ಉಪ್ಪು
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಬೆಣ್ಣೆ, ಸಕ್ಕರೆ, ವೆನಿಲ್ಲಾ ಎಸೆನ್ಸ್, ಅಡುಗೆ ಸೋಡಾ, ಬೇಕಿಂಗ್ ಪೌಡರ್, ಮೈದಾಹಿಟ್ಟು, ಕೋಕೋಪುಡಿ ಮತ್ತು ಮೊಟ್ಟೆ ಸೇರಿಸಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
* ಬಳಿಕ ಅದಕ್ಕೆ ಮೊಸರು ಸೇರಿಸಿ ಕಲಸಿ.
* ಈಗ ಒಂದು ಕೇಕ್ ಪ್ಯಾನ್‌ಗೆ ಒಳಭಾಗದಲ್ಲಿ ಬೆಣ್ಣೆಯನ್ನು ಸವರಿ. ಅದಕ್ಕೆ ಪಾತ್ರೆಯಲ್ಲಿರುವ ಮಿಶ್ರಣವನ್ನು ಹಾಕಿ ಸಮನಾಗಿರುವಂತೆ ಹರಡಿ
* ಈಗ ಇದರ ಮೇಲೆ ಸ್ಟ್ರಾಬೆರಿ ಹಣ್ಣುಗಳ ಬಿಲ್ಲೆಗಳನ್ನು ಇಡಿ.
* ಕುಕ್ಕರಿನಲ್ಲಿ ಸುಮಾರು ಒಂದು ಲೀಟರ್ ನೀರು, ಅರ್ಧ ಕಪ್ ಉಪ್ಪು ಹಾಕಿ ಬಿಸಿಮಾಡಿ.
* ಈಗ ನೀರು ಕುದಿಬರುತ್ತಿದ್ದಂತೆಯೇ ಕೇಕ್ ಪಾತ್ರೆಯನ್ನು ಕುಕ್ಕರಿನ ಒಳಗಿಟ್ಟು (ಪಾತ್ರೆಯ ತಳದಲ್ಲಿ ಇಡ್ಲಿ ಪಾತ್ರೆ ಇಡುವ ತಟ್ಟೆ ಅಥವಾ ಒಂದು ಚಿಕ್ಕ ಕಪ್ ಬೋರಲಿಡಿ) ಮುಚ್ಚಳ ಮುಚ್ಚಿ.
* ಸೀಟಿ ಹಾಕದೇ ಮಧ್ಯಮ ಉರಿಯಲ್ಲಿ ಸುಮಾರು ಮೂವತ್ತು ನಿಮಿಷ ಬೇಯಿಸಿ.
* ಅರ್ಧಗಂಟೆಯ ಬಳಿಕ ಮುಚ್ಚಳ ತೆರೆದು ಕೇಕ್ ಪಾತ್ರೆಯನ್ನು ತಣ್ಣಗಾಗಲು ಇಡಿ. ಬಳಿಕ ಕುಟುಂಬದೊಂದಿಗೆ ಸೇರಿ ಸವಿಯಿರಿ.