ವಿದ್ಯಾರ್ಥಿಗಳೇ ಗಮನಿಸಿ: ಸಿಇಟಿ ಪರೀಕ್ಷೆ ಬರೆದಿದ್ದೀರಾ? ಹಾಗಿದ್ರೆ ತಪ್ಪದೇ ಈ ಮಾಹಿತಿ ಓದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿ ನೀಡಿದ್ದು, ಪ್ರಮಾಣಪತ್ರ, ಅಂಕ ವಿವರ ಸಲ್ಲಿಕೆಗೆ ಅವಕಾಶ ನೀಡಿದೆ.

ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ವಿಶೇಷ ಪ್ರವರ್ಗಗಳ ಪ್ರಮಾಣ ಪತ್ರ ಮತ್ತು ಸಂಬಂಧಿಸಿದ ದಾಖಲೆಗಳನ್ನು ಈವರೆಗೆ ಸಲ್ಲಿಸದೆ ಇರುವವರು ಜೂನ್ 2 ಅಥವಾ ಜೂನ್ 6 ರಂದು ಖುದ್ದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಬಹುದು.

ರಾಜ್ಯ ಪಠ್ಯಕ್ರಮ ಹೊರತುಪಡಿಸಿ ಬೇರೆ ಬೇರೆ ಪಠ್ಯಕ್ರಮಗಳ ಅಡಿಯಲ್ಲಿ 2023ರಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದು, ಇದುವರೆಗೂ ತಮ್ಮ ಅಂಕಗಳ ದಾಖಲೆ ಸಲ್ಲಿಸದೇ ಇರುವವರಿಗೆ ಜೂನ್ 3ರ ಸಂಜೆ 4 ಗಂಟೆಯಿಂದ ಜೂನ್ 6ರ ಸಂಜೆ 5.30ರ ವರೆಗೆ ಮತ್ತೊಮ್ಮೆ ಪ್ರಾಧಿಕಾರದ ಪೋರ್ಟಲ್ ತೆರೆಯಲಾಗುತ್ತದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!