ಈ ತಿಂಗಳು ನಿಮ್ಮ ಬರ್ಥ ಡೇ ಇದೆಯಾ? ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ತುಂಬಾನೇ ಸ್ಪೆಶಲ್. ಇವರ ಗುಣಗಳು ಅದ್ಭುತವಾಗಿ ಇರುತ್ತದೆ. ನೀವು ಮಾರ್ಚ್ನಲ್ಲಿ ಹುಟ್ಟಿದವರ ಗುಣಗಳನ್ನು ಅರಿಯಬೇಕಾದರೆ ಈ ಲೇಖನ ನಿಮಗೆ ಸಹಾಯ ಮಾಡುತ್ತದೆ.. ಮಾರ್ಚ್ನಲ್ಲಿ ಹುಟ್ಟಿದವರ ಗುಣಗಳು ಈ ರೀತಿ ಇರುತ್ತದೆ..
- ತುಂಬಾ ಜಾಣರು
ಮಾರ್ಚ್ನಲ್ಲಿ ಹುಟ್ಟಿದವರು ತುಂಬಾನೇ ಜಾಣರು. ಇವರನ್ನು ಯಾರೂ ಬಕ್ರಾ ಮಾಡಲು ಆಗುವುದಿಲ್ಲ. ಸಕತ್ ಸ್ಮಾರ್ಟ್ ಆಗಿ ಯೋಚಿಸುತ್ತಾರೆ. - ಬಾಸಿ ನೇಚರ್
ಈ ತಿಂಗಳಲ್ಲಿ ಹುಟ್ಟಿದವರು ಸ್ವಲ್ಪ ಡಾಮಿನೇಟಿಂಗ್ ಆಗಿರುತ್ತಾರೆ. ಜೊತೆಗೆ ಬಾಸಿ ನೇಚರ್ ಇವರದ್ದಾಗಿರುತ್ತದೆ. ಮುಂದೆ ಇವರು ಒಂದು ಕಂಪನಿಯ ಸಿಇಒ ಆಗುವಷ್ಟು ಕೆಪಾಸಿಟಿ ಹೊಂದಿರುತ್ತಾರೆ. - ಹೃದಯವಂತರು
ಇವರು ಹೃದಯವಂತರು. ಬೇರೆಯವರ ಕಷ್ಟಕ್ಕೆ ಮರುಗುತ್ತಾರೆ. ಗೋಲ್ಡನ್ ಹಾರ್ಟ್ ಇರುವ ವ್ಯಕ್ತಿಗಳಿವರು. ಅವರ ಸುತ್ತಮುತ್ತ ಇರುವ ವ್ಯಕ್ತಿಗಳ ಖುಷಿಗೆ ಯಾವಾಗಲೂ ಶ್ರಮಿಸುತ್ತಾರೆ. - ಯಾವಾಗಲೂ ಪಾಸಿಟಿವ್
ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ಯಾವಾಗಲೂ ಪಾಸಿಟಿವ್ ಆಗಿರುತ್ತಾರೆ. ತನಗೆ ಈ ಕೆಲಸ ಆಗುವುದಿಲ್ಲ ಎನ್ನುವ ಮಾತೇ ಇಲ್ಲ. ಮೊದಲು ಕೆಲಸ ಆರಂಭಿಸಿ ನಂತರ ಆಗದಿದ್ದರೆ ಬಿಡುತ್ತಾರೆ. - ಕ್ರಿಯೇಟಿವ್ ಜನ
ಇವರು ತುಂಬಾನೇ ಕ್ರಿಯೇಟಿವ್ ಹತ್ತು ಮಂದಿ ಒಂದು ವಿಷಯ ಹೇಳಿದರೆ ಇವರು ಹನ್ನೊಂದನೆ ವ್ಯಕ್ತಿಯಾಗಿ ಬೇರೆ ವಿಷಯ ಹೇಳುತ್ತಾರೆ. ಔಟ್ ಆಫ್ ದ ಬಾಕ್ಸ್ ಥಿಂಕ್ ಮಾಡುತ್ತಾರೆ. ಕ್ರಿಯೇಟಿವ್ ಕೆಲಸ ಇವರಿಗೆ ಹೇಳಿ ಮಾಡಿಸಿದ್ದು. - ದೇವರ ಮೇಲೆ ಭಕ್ತಿ
ಇವರು ದೈವಿ ಭಕ್ತರು. ದೇವರನ್ನು ತುಂಬಾನೇ ನಂಬುತ್ತಾರೆ. ದೇವರು ನಮಗೆ ಒಳ್ಳೆಯದು ಮಾಡುತ್ತಾರೆ ಎನ್ನುವ ಒಳ್ಳೆಯ ಭಾವನೆಯಿಂದಲೇ ಎಲ್ಲ ಕೆಲಸ ಮಾಡುತ್ತಾರೆ. ಪಾಸಿಟಿವ್ ಆದ ಇವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. - ಒಬ್ಬರೇ ಇರೋದು ಇಷ್ಟ
ಸ್ನೇಹಿತರ ಜೊತೆ ಸುತ್ತೋದು, ಯಾವಾಗಲೂ ಜನರ ಮಧ್ಯೆ ಇರೋದಕ್ಕಿಂತ ಇವರಿಗೆ ಒಬ್ಬರೇ ಸಮಯ ಕಳೆಯುವುದು ಇಷ್ಟ. ತಮ್ಮನ್ನು ತಾವು ತುಂಬಾನೇ ಇಷ್ಟಪಡುತ್ತಾರೆ.