spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೀನಾವನ್ನು ಕಾಡಿರುವ ಮಹಾಮಳೆ, ಪ್ರವಾಹದ ವಿವರ ಇಲ್ಲಿದೆ!

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ತೀವ್ರ ಮಳೆ, ಪ್ರವಾಹದಿಂದಾಗಿ 1.76 ದಶಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟ ಅನುಭವಿಸಿದ್ದಾರೆ.
ಒಟ್ಟಾರೆ 1,20,100 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 189,973 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.
ಭಾರೀ ಮಳೆಯಿಂದಾಗಿ 17,೦೦೦ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ ಎಂದು ವರದಿಯಾಗಿದೆ.
ಅ.2 ರಿಂದ ಗುರುವಾರದವರೆಗೆ ಸರಾಸರಿ 119.5. ಮಿ.ಮೀ ಮಳೆಯಾಗಿದ್ದು, ಹದಿನೆಂಟು ಪ್ರದೇಶಗಳಲ್ಲಿ 200 ಮಿ.ಮೀಗಿಂತಲೂ ಹೆಚ್ಚಿನ ಮಳೆಯಾಗಿದೆ.

51 ಪ್ರದೇಶಗಳಲ್ಲಿ100-200 ಮಿ.ಮೀಯಷ್ಟು ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ಥವಾಗಿದೆ. ಕೆಲವೇ ದಿನಗಳಲ್ಲಿ 285.2. ಮಿ.ಮೀ ಗರಿಷ್ಠ ಮಳೆ ದಾಖಲಾಗಿದೆ.
ಶಾಂಕ್ಸಿ ಪ್ರಾಂತ್ಯದ ರಾಜಧಾನಿ ತೈಯುವಾನ್‌ನಲ್ಲಿ ಸರಾಸರಿ 185.6.ಮಿ.ಮೀ ಮಳೆ ಸುರಿದಿದ್ದು, 1981ರಿಂದ 2010 ರವರೆಗೆ ತೈಯುವಾನ್‌ನಲ್ಲಿ ಸುರಿದ ಮಾಸಿಕ ಮಳೆ ಸುಮಾರು 25  ಮಿ.ಮೀ ಆಗಿದೆ.
ಲಿನ್ಫೆನ್, ಲುಲಿಯಾಂಗ್, ಝಿನ್‌ಜೌ ನಗರಗಳಲ್ಲಿ ಅಕ್ಟೋಬರ್‌ನಲ್ಲಿ ಹಿಂದಿನ ವರ್ಷಗಳಲ್ಲಿ ಸರಾಸರಿ 50 ಮಿ.ಮೀಗಿಂತ ಕಡಿಮೆ ಮಳೆಯಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss