ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, August 1, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿರಿಯಡ್ಸ್ ಡೇಟ್ ನೆನಪಿಲ್ವಾ? ನಿಮ್ಮ ದೇಹವೇ ಪಿರಿಯಡ್ಸ್ ಹತ್ರ ಬಂತು ಅಂತ ನೆನಪಿಸೋದು ಹೀಗೆ..

ಹೆಣ್ಣುಮಕ್ಕಳಿಗೆ ತಮ್ಮ ಪಿರಿಯಡ್ಸ್ ಡೇಟ್ ಚೆನ್ನಾಗಿಯೇ ನೆನಪಿರುತ್ತದೆ. ಆದರೆ ಕೆಲವೊಮ್ಮೆ ಅದು ಮಿಸ್ ಆಗಿಬಿಡುತ್ತದೆ. ಆದರೆ ನಮ್ಮ ದೇಹವೇ ಪಿರಿಯಡ್ಸ್ ಹತ್ತಿರ ಇದೆ ಎನ್ನೋದಕ್ಕೆ ಲಕ್ಷಣಗಳನ್ನು ತೋರಿಸುತ್ತದೆ. ಈಗ ನಾವು ಟ್ರಿಪ್ ಹೋಗಿದ್ದೇವೆ ಎಂದು ಅಂದುಕೊಳ್ಳಿ. ಆಗ ಸುತ್ತಾಡಿ ಕಾಳು ನೋವು ಆಗುವುದು ಮಾಮೂಲಿ. ಅದೇ ಸಮಯಕ್ಕೆ ಪಿರಿಯಡ್ಸ್ ಮುನ್ಸೂಚನೆಯಾಗಿ ಕಾಲು ನೋವಾದರೂ ಗೊತ್ತಾಗುವುದಿಲ್ಲ. ಯಾವ ಲಕ್ಷಣಗಳು ಬರುತ್ತವೆ ನೋಡಿ..

  • ಹೊಟ್ಟೆ ದಪ್ಪ: ಹಲವರಿಗೆ ಪಿರಿಯಡ್ಸ್‌ಗೆ ಇನ್ನೇನು ಕೆಲವೇ ದಿನ ಇದೆ ಎಂದಾದರೆ ಹೊಟ್ಟೆ ದಪ್ಪ ಎನಿಸುತ್ತದೆ. ಏನು ಜಾಸ್ತಿ ತಿಂದಿಲ್ಲ ಎಂದರೂ ಹೊಟ್ಟೆ ಭಾರ ಆಗುತ್ತದೆ.
  • ಬೆನ್ನು ನೋವು: ಕೆಳಬೆನ್ನು ನೋವು ಬರುತ್ತದೆ. ಸಣ್ಣ ಕೆಲಸ ಮಾಡಿ ಮುಗಿಸಿದರೂ ಸೊಂಟ ನೋವಾಗುತ್ತದೆ. ಇದು ನಿಮ್ಮ ಪಿರಿಯಡ್ಸ್‌ಗೆ ಇನ್ನೇನು ಕೆಲವೇ ದಿನ ಎನ್ನುವುದರ ಲಕ್ಷಣ.
  • ಎದೆ ಭಾರ: ತೂಕ ಹೆಚ್ಚಾದಾಗ ಹೇಗೆ ದೇಹದ ಎಲ್ಲ ಭಾಗಗಳೂ ಭಾರ ಎನಿಸುತ್ತವೆಯೋ ಅದೇ ರೀತಿ ಎದೆ ಕೂಡ ಭಾರ ಎನಿಸುತ್ತದೆ. ಎದೆ ಊದಿದೆ ಎನ್ನುವ ಭಾವನೆ ಬರುತ್ತದೆ. ಹೀಗೆಲ್ಲ ಅನಿಸಿದ ಸ್ವಲ್ಪ ದಿನ ಆಚೀಚೆ ಯಾವುದೇ ಟ್ರಿಪ್ ಅಥವಾ ಪ್ಲಾನ್ ಮಾಡಬೇಡಿ.
  • ಸುಸ್ತು: ಏನೂ ಕೆಲಸ ಮಾಡಿಲ್ಲ, ಆದರೂ ಸಿಕ್ಕಾಪಟ್ಟೆ ಸುಸ್ತು. ಯಾವ ಕೆಲಸ ಮಾಡಲೂ ಇಂಟ್ರೆಸ್ಟ್ ಇಲ್ಲ. ಕೆಲವೊಮ್ಮೆ ಮಾಡಲು ಎದ್ದರೆ ತುಂಬಾನೇ ಸುಸ್ತಾಗುತ್ತದೆ. ಮನೆಯಲ್ಲಿ ಸುಮ್ಮನೆ ಮಲಗಿಬಿಡೋಣ ಎನಿಸುತ್ತದೆ.
  • ಮೊಡವೆ: ಮುಖದ ಮೇಲೆ ಮೊಡವೆ ಬಂತು ಎಂದರೆ ಸದ್ಯದಲ್ಲೇ ಪಿರಿಯಡ್ಸ್ ಆರಂಭ ಎಂದು ಅರ್ಥ. ಪಿರಿಯಡ್ಸ್ ಮುಗಿಯುವ ಸಮಯದೊಳಗೆ ಪಿಂಪಲ್ ಕೂಡ ಹೋಗಿಬಿಡುತ್ತದೆ. ಆದರೆ ನೀವು ಅದನ್ನು ಉಗುರಿನಲ್ಲಿ ಹಿಚುಕಿದರೆ ಕಲೆ ಹಾಗೇ ಉಳಿಯುತ್ತದೆ.
  • ಮೂಡ್ ಸ್ವಿಂಗ್ಸ್: ಪಿರಿಯಡ್ಸ್ ಸಮಯ ಹಾಗೂ ಅದಕ್ಕೂ ಮುಂಚೆ ಮೂಡ್ ಸ್ವಿಂಗ್ಸ್ ಹೆಚ್ಚಾಗಿರುತ್ತದೆ. ಅಳುವುದು, ನಗುವುದು, ಕೋಪ ಮಾಡಿಕೊಳ್ಳುವುದು, ಮತ್ತೆ ಬೇಗ ಸಮಾಧಾನ ಆಗುವುದು ಹೀಗೆ ನೂರಾರು ರೀತಿ ಮೂಡ್ ಬದಲಾವಣೆ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss