ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಟಿಯಲ್ಲಿದ್ದ ದೊಡ್ಡ ಮನೆ ಬಿಟ್ಟು ಮಣ್ಣಿನ ಗುಡಿಸಲು ಕಟ್ಟಿ ನೆಮ್ಮದಿ ಜೀವನ ಮಾಡ್ತಿದ್ದಾರೆ ಕೇರಳದ ದಂಪತಿ!

ನಮ್ಮ ಮನೆ ಹೇಗಿರಬೇಕು?

ಕನಸಿನ ಮನೆಗೆ ಪಾರವೇ ಇಲ್ಲ, ಗೂಗಲ್ ಮಾಡಿ ಡಿಸೈನ್‌ಗಳನ್ನು ನೋಡಿದಷ್ಟು ಇದೂ ಇರಲಿ, ಇದೂ ಇರಲಿ ಎಂದು ನೋಡುತ್ತಲೇ ಇರುತ್ತೇವೆ. ಆದರೆ ಎಂದಾದರೂ ಎಕೋ ಹೌಸ್ ಬಗ್ಗೆ ಆಲೋಚನೆ ಮಾಡಿದ್ದೀವಾ? ಖಂಡಿತಾ ಇಲ್ಲ ಲಕ್ಷ ಮಂದಿ ಹೇಗೆ ಕಟ್ಟಿಸಿದ್ದಾರೋ ನಾವು ಹಾಗೆ ಕಟ್ಟಿಸುತ್ತೇವೆ ಎನ್ನುತ್ತೀರಾ.. ಆದರೆ ಇಲ್ಲೊಂದು ಜೋಡಿ ತುಂಬಾನೇ ಸೊಫೆಸ್ಟಿಕೇಟೆಡ್ ಆಗಿದ್ದ ಮನೆ ಬಿಟ್ಟು ಎಕೋ ಹೌಸ್ ಕಟ್ಟಿದ್ದಾರೆ.
ಏನಿದು ಎಕೋ ಹೌಸ್ ಅಂತೀರಾ? ಇದು ಪರಿಸರಕ್ಕೆ ಹಾನಿಯಾಗದಂತೆ ಕಟ್ಟುವ ಮನೆ. ಪರಿಸರಕ್ಕೆ ಆದಷ್ಟು ಕಡಿಮೆ ಹಾನಿಯಾಗುವಂಥ ಡಿಸೈನ್‌ನಲ್ಲಿ ಈ ಮನೆ ಕಟ್ಟಲಾಗುತ್ತದೆ. ರೈನ್ ವಾಟರ್ ಹಾರ್ವೆಸ್ಟಿಂಗ್, ರೀಸೈಕಲ್, ಗ್ಲೋಬಲ್ ವಾರ್ಮಿಂಗ್ ತಡೆಗಟ್ಟುವುದು ಹೀಗೆ ಹಲವು ವಿಷಯಗಳನ್ನು ಗಮನದಲ್ಲಿಡಲಾಗುತ್ತದೆ.

ಎಲ್ಲಿ ನೋಡಿದರೂ ಹಸಿರು
ಕೇರಳದ ಕನ್ನೂರ್‌ನಲ್ಲಿ ಇರುವ ಎಕೋ-ಹೌಸ್‌ನನ್ನು ನೀವು ನೋಡಲೇಬೇಕು. ಎಲ್ಲಿ ನೋಡಿದರೂ ಹಸಿರು, ಮಣ್ಣಿನ ಗೋಡೆಯ ಮುದ್ದಾದ ಮನೆ. ಈ ಮನೆ ಹರಿ ಹಾಗೂ ಆಶಾ ಅವರದ್ದು. ಸಿಟಿಯಲ್ಲಿದ್ದ ದೊಡ್ಡ ಮನೆ ಬಿಟ್ಟು ಎಕೋ ಹೌಸ್ ನಿರ್ಮಿಸಿ ಅದರಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.
ಈ ಮನೆಯ ಗೋಡೆಗಳು ಉಸಿರಾಡುತ್ತವೆ. ಫ್ಯಾನ್ ಅವಶ್ಯಕತೆ ಕೂಡ ಇಲ್ಲವಂತೆ. ಈ ಮನೆಯಿಂದ ಭೂಮಿತಾಯಿಗೆ, ನಿಸರ್ಗದೇವತೆಗೆ ಸಣ್ಣ ತೊಂದರೆಯೂ ಆಗಿಲ್ಲ.

How a Kerala couple built a sustainable mud house of their dreamsಹೆಂಡತಿಗೆ ಸಾಥ್!
ಹರಿಯವರದ್ದು ಕನ್ನೂರ್‌ನಲ್ಲಿ ವಾಟರ್ ಸಪ್ಲೇ ಕೆಲಸ. ಆಶಾ ಹಳ್ಳಿಗರಿಗೆ ತೋಟ ಮಾಡುವ ಬಗ್ಗೆ, ಬೆಳೆ ಬೆಳೆಯುವವರಿಗೆ ಮಾಹಿತಿ ನೀಡುತ್ತಾರೆ. ಕಳೆದ ಒಂಬತ್ತು ವರ್ಷದಿಂದ ತಾವು ಕನಸುಕಟ್ಟಿದ್ದ ಜೀವನವನ್ನು ನಡೆಸುತ್ತಿದ್ದಾರೆ ಈ ಎಕೋ ಫ್ರೆಂಡ್ಲಿ ದಂಪತಿ. 34 ಎಕರೆ ಕಾಡಿನಲ್ಲಿ ಇವರು ಮನೆ,ತೋಟ ಎಲ್ಲವನ್ನೂ ನಿರ್ಮಿಸಿದ್ದಾರೆ. ಮದುವೆಗೆ ಮುಂಚೆಯಿಂದಲೇ ಆಶಾಗೆ ಈ ರೀತಿ ಮನೆಯೊಂದನ್ನು ಕಟ್ಟಿ ನೆಮ್ಮದಿಯಿಂದ ಬದುಕಬೇಕು ಎನ್ನುವ ಆಸೆ ಇತ್ತು. ಇದಕ್ಕೆ ಹರಿ ಕೂಡ ಸಾಥ್ ನೀಡಿದ್ದಾರೆ.

In The Heart Of God's Own Country Lies This Little Paradise, The Green Home  Which Remains Cool Even In Scorching Summersಐಡಿಯಾ ಬಂದದ್ದು ಹೇಗೆ?
ಆಶಾ ಕಾಲೇಜಿನ ಪ್ರೊಫೆಸರ‍್ಸ್ ಯಾರಾದರೂ ಮನೆ ಕಟ್ಟಿದರೆ ಪರಿಸರಕ್ಕೆ ಹಾನಿಯಾಗದ ಮನೆ ಕಟ್ಟಿ ಎಂದು ಹೇಳುತ್ತಿದ್ದರು.ಡಿಗ್ರಿ ಮುಗಿನ ನಂತರ ಇದರ ಬಗ್ಗೆ ಹೆಚ್ಚು ರಿಸರ್ಚ್ ಮಾಡಿದೆ. ಮದುವೆ ನಂತರ ಹರಿಗೆ ನನ್ನ ಆಸೆ ತಿಳಿಸಿದೆ. ಅವರು ಇದಕ್ಕೆ ಕೈ ಜೋಡಿಸಿದ ನಂತರ ಪ್ರಾಕ್ಟಿಕಲ್ ಆಗಿ ಈ ಮನೆ ಕಟ್ಟೋದು ಹೇಗೆ ಎಂದು ಪ್ಲಾನ್ ಮಾಡಿದೆವು ಎನ್ನುತ್ತಾರೆ ಆಶಾ.

Couple Creates Natural Forest and Energy Efficient Homeಮನೆ ಕಟ್ಟಿದ್ದು ಹೇಗೆ?
ಈ ಮನೆಗೆ ಅಬ್ಬಬ್ಬಾ ಎಂದರೆ ನಾಲ್ಕು ಲಕ್ಷ ಖರ್ಚಾಗಿದೆ. ಇದರಲ್ಲಿ ಹೆಚ್ಚಿನ ಹಣ ಕೂಲಿಗಾರರಿಗೆ ನೀಡಿದ್ದಾರೆ. ಇನ್ನು ಮಣ್ಣು,ಕಲ್ಲು,ಮರ ಎಲ್ಲವೂ ಭೂಮಿತಾಯಿ ನೀಡಿದ್ದು. ಅವರ ಕರೆಂಟ್ ಅವರೇ ಉತ್ಪಾದಿಸುತ್ತಾರೆ. ಟಾಯ್ಲೆಟ್‌ನ ನೀರು ಸೀದ ತೋಟಕ್ಕೆ ಹೋಗುವಂತೆ ಮಾಡಿದ್ದಾರೆ.

Meet owners of a unique and eco-friendly mud house in the lap of nature |  Lifestyle Decor | English Manoramaಮನೆಯಲ್ಲೇನಿದೆ?
ಎಲ್ಲರೂ ಇವೆಲ್ಲವೂ ಇಲ್ಲದೆ ಮನೆಯಲ್ಲಿರೋಕೆ ಸಾಧ್ಯವೇ ಇಲ್ಲ ಎನ್ನುವ ಯಾವ ವಸ್ತುವೂ ಆಶಾ ಹರಿ ಮನೆಯಲ್ಲಿಲ್ಲ. ಫ್ಯಾನ್,ಫ್ರಿಡ್ಜ್,ಟಿವಿ,ವಾಶಿಂಗ್ ಮಶೀನ್,ಮಿಕ್ಸಿ,ಎಸಿ ಯಾವುದೂ ಇಲ್ಲ. ಮಣ್ಣಿನ ಮಡಿಕೆಯನ್ನು ಭೂಮಿಯಲ್ಲಿ ಇಟ್ಟು ಅದರೊಳಗೆ ವಸ್ತುಗಳನ್ನು ಕೆಡದಂತೆ ಶೇರ್ ಮಾಡುತ್ತಾರೆ.

In The Heart Of God's Own Country Lies This Little Paradise, The Green Home  Which Remains Cool Even In Scorching Summers
ತಾವೇ ಬೆಳೆಯುತ್ತಾರೆ
ಮನೆಗೆ ಬೇಕಾದ ಎಲ್ಲ ತರಕಾರಿ ಹಣ್ಣುಗಳನ್ನು ತಾವೇ ಬೆಳೆಯುತ್ತಾರೆ. ನ್ಯಾಚುರಲ್ ಫಾರ್ಮಿಂಗ್‌ಗೆ ಹೆಚ್ಚು ಬೆಲೆ ಕೊಡುತ್ತಾರೆ. ಅದರ ಪಾಡಿಗೆ ಅದನ್ನು ಬೆಳೆಯುವುದಕ್ಕೆ ಬಿಡುತ್ತಾರೆ. ತೋಟ ಮಾಡಬಯಸುವವರು ಮೊದಲು ಗಿಡಗಳನ್ನು ಗಮನಿಸಿ. ಅದರಲ್ಲೂ ಕಾಡಿನಲ್ಲಿ ಗಿಡಗಳಿಗೆ ನೀರು ಹಾಕುವ ಅಗತ್ಯವೇ ಇಲ್ಲ ಎನ್ನುತ್ತಾರೆ ಆಶಾ.

Here's How A Couple From Kerala Built A 'Forest' Around Their House To  Practise Sustainable Living

ಮನೆ ಕಟ್ಟೋಕೆ ಲಕ್ಷಾಂತರ ದುಡ್ಡು ಹೊಂದಿಸಿ ಕಷ್ಟಪಡುವ ಮಂದಿಯ ಮುಂದೆ ಕೇರಳದ ಈ ಜೋಡಿ ತುಂಬಾನೇ ವಿಭಿನ್ನವಾಗಿ ನಿಲ್ಲುತ್ತಾರೆ. ಇವರ ಜೀವನ ನೂರಾರು ಜನರ ಕನಸೂ ಕೂಡ ಆಗಿರಬಹುದು ಅಲ್ವಾ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss