ಇಂದು ಭಾನುವಾರ ನಿಧಾನಕ್ಕೆ ತಿಂಡಿ ಮಾಡಿಕೊಂಡು ತಿನ್ನೋಣ ಎಂದುಕೊಂಡಿದ್ದೀರಾ? ಬೆಳಗ್ಗೆ ಏನು ಮಾಡೋದು ಅನ್ನೋದೆ ಚಿಂತೆ ಆದರೆ ಈಸಿಯಾದ ತಿಂಡಿಯೊಂದನ್ನು ಇಂದು ಮಾಡೋದಕ್ಕೆ ಹೇಳಿಕೊಡುತ್ತೇವೆ. ಅದೇ ಮಸಾಲಾ ಉಪ್ಪಿಟ್. ಇದು ಹೆಲ್ತಿ ಕೂಡ. ಇದನ್ನು ಹೇಗೆ ಮಾಡೋದು ಅನ್ಕೋತೀರಾ? ಇಲ್ಲಿದೆ ರೆಸಿಪಿ..
ಬೇಕಾಗಿರುವ ಸಾಮಾಗ್ರಿ
- ಗೋಧಿ ರವೆ
- ಈರುಳ್ಳಿ
- ಟೊಮ್ಯಾಟೊ
- ಹಸಿಮೆಣಸು
- ಶುಂಠಿ
- ಕಡ್ಲೇಬೇಳೆ
- ಅರಿಶಿಣ
ಮಾಡುವ ವಿಧಾನ - ಮೊದಲು ಬಾಣೆಲೆಗೆ ಎಣ್ಣೆ ಹಾಕಿ
- ನಂತರ ಹಸಿಮೆಣಸು ಹಾಕಿ
- ನಂತರ ಶುಂಠಿ ಹಾಕಿ
- ನಂತರ ಈರುಳ್ಳಿ ಹಾಕಿ
- ನಂತರ ಟೊಮ್ಯಾಟೊ ಹಾಕಿ.
- ಇನ್ನೊಂದು ಪಾತ್ರೆಯಲ್ಲಿ ಗೋಧಿ ರವೆಯನ್ನು ಹುರಿದು ಇಟ್ಟುಕೊಳ್ಳಿ.
- ನಂತರ ಈ ಗೊಜ್ಜಿಗೆ ನೀರು ಹಾಕಿ.
- ನೀರು ಕುದ್ದ ಮೇಲೆ ನೀರಿನ ಅರ್ಧದಷ್ಟು ಗೋಧಿ ರವೆ ಹಾಕಿ.
- ಇದನ್ನು ನಿಮ್ಮ ಹದಕ್ಕೆ ಮಿಕ್ಸ್ ಮಾಡಿ ತುಪ್ಪ ಹಾಕಿ ಬಿಸಿ ಬಿಸಿ ತಿಂದರೆ ಗೋಧಿ ರವೆ ಮಸಾಲಾ ಉಪ್ಪಿಟ್ ರೆಡಿ