KITCHEN TIPS | ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದಿರಲು ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಡುಗೆ ಮಾಡೋದಂದ್ರೆ ಅಷ್ಟೊಂದು ಸುಲಭದ ಮಾತಲ್ಲ. ಇಲ್ಲಿ ಶುಚಿ, ರುಚಿ ಜೊತೆಗೆ ಅಡುಗೆ ಮಾಡುವಾಗ ಪಾಲಿಸಬೇಕಾದ ಕೆಲವು ಸಲಹೆಗಳೂ ತಿಳಿದಿರಬೇಕು. ಅನೇಕರಿಗೆ ಈರುಳ್ಳಿ ಕತ್ತರಿಸುವುದು ಅಂದ್ರೆ ಅಳು ಬರತ್ತೆ, ಅಂತದ್ರಲ್ಲಿ ಈರುಳ್ಳಿ ಕತ್ತರಿಸುವಾಗ ಅಳು ಬರದೇ ಇರುತ್ತಾ ?
ಇನ್ಮುಂದೆ ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿನೋಡಿ ಚಕ್‌-ಚಕ್ ಅಂತ ಈರುಳ್ಳಿ ಕತ್ತಿರಿಸಿದರೂ ಒಂದು ತೊಟ್ಟು ಕಣ್ಣೀರು ಬರುವುದಿಲ್ಲ.

1. ಫ್ರೀಜ್ ಮಾಡಿದ ಈರುಳ್ಳಿ ಬಳಸಿ :

ನೀವು ಈರುಳ್ಳಿಯ ಸಿಪ್ಪೆ ಸುಲಿದು ಒಂದು ಅರ್ಧ ಗಂಟೆ ಫ್ರೀಜರ್‌ನಲ್ಲಿ ಇಟ್ಟು ನಂತರ ಕತ್ತರಿಸಿ. ಹೀಗೆ ಮಾಡಿದರೆ ಕಣ್ಣು ಉರಿಯಾಗುವುದಿಲ್ಲ, ಸುಲಭವಾಗಿ ಈರುಳ್ಳಿ ಕತ್ತರಿಸಬಹುದು.

2. ತಣ್ಣೀರಿನಲ್ಲಿ ಹಾಕಿಡಿ :

ನೀವು ಈರುಳ್ಳಿ ಸಿಪ್ಪೆ ಸುಲಿದು ಅರ್ಧ ಗಂಟೆ ತಣ್ಣೀರಿನಲ್ಲಿ ಹಾಕಿಡಿ. ಆದರೆ ಈ ರೀತಿ ನೀರಿನಲ್ಲಿ ಹಾಕಿಟ್ಟರೆ ಈರುಳ್ಳಿ ಒರೆಸಿ ಕತ್ತರಿಸಿ.

3. ಹರಿತವಾದ ನೈಫ್‌ ಬಳಸಿ :

ಈರುಳ್ಳಿ ಕತ್ತರಿಸುವಾಗ ಹರಿತವಾದ ನೈಫ್‌ ಬಳಸಿ, ಆಗ ಬೇಗನೆ ಕತ್ತಿರಿಸಿ ಮುಗಿಸಬಹುದು. ಇದರಿಂದ ಈರುಳ್ಳಿ ಕತ್ತರಿಸುವಾಗ ಕಣ್ಣು ಉರಿ ಕಡಿಮೆಯಾಗುವುದು.

4. ಬಾಯಲ್ಲಿ ಬ್ರೆಡ್‌ ಇಟ್ಟುಕೊಳ್ಳಿ :

ನಿಮಗೆ ತಮಾಷೆ ಅನಿಸಬಹುದು. ಆದರೆ ನಿಜವಾಗಲೂ ಇದು ವರ್ಕ್ ಆಗುತ್ತೆ. ನೀವು ಬಾಯಲ್ಲಿ ಬ್ರೆಡ್‌ ಇಟ್ಟು ಈರುಳ್ಳಿ ಕತ್ತರಿಸಿದಾಗ ಈರುಳ್ಳಿಯಿಂದ ಬಿಡುಗಡೆಯಾಗುವ ಗ್ಯಾಸ್‌ ಅನ್ನು ಬ್ರೆಡ್‌ ಚೂರು ಹೀರಿಕೊಳ್ಳುವುದರಿಂದ ಕಣ್ಣು ಉರಿ ಕಡಿಮೆಯಾಗುತ್ತದೆ.

5. ಕನ್ನಡಕ ತಯಾರಿಸಿ :

ನೀವು ಸನ್‌ಗ್ಲಾಸ್‌ ಅನ್ನು ಬಿಸಿಲಿಗೆ ಹೋಗುವಾಗ ಮಾತ್ರವಲ್ಲ ಈರುಳ್ಳಿ ಕತ್ತರಿಸುವಾಗ ಬಳಸಿದರೂ ಕಣ್ಣು ಉರಿಯಾಗುವುದು ಕಡಿಮೆಯಾಗುವುದು. ಈ ವಿಧಾನ ಕೂಡ ಈರುಳ್ಳಿ ಕತ್ತರಿಸುವಾಗ ತುಂಬಾ ಪ್ರಯೋಜನಕಾರಿಯಾಗಿದೆ.

6. ಕತ್ತರಿಸುವಾಗ ಉಲ್ಟಾ ಇಟ್ಟು ಕತ್ತರಿಸಿ :

ಸಾಮಾನ್ಯವಾಗಿ ಈರುಳ್ಳಿ ಕತ್ತರಿಸುವಾಗ ಅದರ ಸಿಪ್ಪೆ ಭಾಗ ಮೇಲೆ ಇರುವಂತೆ ಕತ್ತರಿಸುತ್ತೇವೆ, ಆದರೆ ಉಲ್ಟಾ ಇಟ್ಟು ಕತ್ತರಿಸಿ. ಆಗ ಕಣ್ಣು ಉರಿಯಾಗುವುದು ಸ್ವಲ್ಪ ಕಡಿಮೆಯಾಗುವುದು.

7. ಗ್ಯಾಸ್ ಉರಿಯುತ್ತಿರುವಾಗ ಕತ್ತರಿಸಿ ಅಥವಾ ಕ್ಯಾಂಡಲ್ ಹಚ್ಚಿಟ್ಟು ಕತ್ತರಿಸಿ :

ತುಂಬಾ ಈರುಳ್ಳಿಯನ್ನು ಕತ್ತರಿಸಬೇಕಿದ್ದಾಗ ನೀವು ಗ್ಯಾಸ್‌ ಉರಿಯುತ್ತಾ ಇರುವಾಗ ಅದರ ಸಮೀಪದಲ್ಲಿ ನಿಂತು ಅಥವಾ ಮೇಣದ ಬತ್ತಿ ಹಚ್ಚಿ ಅದರ ಬಳಿ ನಿಂತು ಕತ್ತರಿಸಿದರೆ ಈರುಳ್ಳಿಯಲ್ಲಿರುವ ಸಲ್ಫರ್ ಅನ್ನು ಉರಿ ಹೀರಿಕೊಳ್ಳುವುದರಿಂದ ಕಣ್ಣು ಉರಿಯಾಗುವುದು ಕಡಿಮೆಯಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!