Sunday, March 7, 2021

Latest Posts

ಮದುವೆಯಲ್ಲಿ ದುಬಾರಿ ಗಿಫ್ಟ್ ಎಂದು ಸ್ನೇಹಿತರು ನೀಡಿದ ಉಡುಗೊರೆ ನೋಡಿ ವಧು-ವರ ಶಾಕ್!!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪೆಟ್ರೋಲ್, ಡೀಸೆಲ್ ಹಾಗೂ ಮದುವೆ ಮನೆ.. ಇದೇನು ಪೆಟ್ರೋಲ್, ಡಿಸೇಲ್ ಹಾಗೂ ಮದುವೆ ಮನೆಗೆ ಏನು ಸಂಬಂಧ ಅಂತೀರಾ?
ಸಂಬಂಧ ಇದೆ.. ಚೆನ್ನೈನ ಮದುವೆ ಮನೆಯೊಂದರಲ್ಲಿ ದಂಪತಿಗೆ ಪೆಟ್ರೋಲ್,ಡಿಸೇಲ್ ಹಾಗೂ ಅಡುಗೆ ಅನಿಲವನ್ನು ಗಿಫ್ಟ್ ಆಗಿ ನೀಡಲಾಗಿದೆ.
ವಿಚಿತ್ರ ಎನಿಸಿದರೂ ಹೌದು, ದುಬಾರಿ ಗಿಫ್ಟ್‌ಗಳನ್ನು ಮದುವೆಯಲ್ಲಿ ನೀಡೋದು ಸಾಮಾನ್ಯ. ಅದೇ ರೀತಿ ಪೆಟ್ರೋಲ್ ರೇಟ್ ದುಬಾರಿ ಎನ್ನುವುದನ್ನು ಬಿಂಬಿಸಲು ನವವಧುವರರಿಗೆ ಸ್ನೇಹಿತರ ಗುಂಪೊಂದು ಪೆಟ್ರೋಲ್ ಗಿಫ್ಟ್ ನೀಡಲಾಗಿದೆ.
ಚೆನ್ನೈನಲ್ಲಿ ಕಾರ್ತಿಕ್ ಹಾಗೂ ಶರಣ್ಯ ಜೋಡಿಯ ಅದ್ಧೂರಿ ವಿವಾಹ ಸಮಾರಂಭ ನಡೆದಿದ್ದು, ನವಜೋಡಿಗಳಿಗೆ ಸ್ನೇಹಿತರೆಲ್ಲ ಸೇರಿ ಎಲ್ ಪಿಜಿ ಸಿಲಿಂಡರ್, ಪೆಟ್ರೋಲ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss