ಹೇಗೆ ಮಾಡೋದು?
ಮೊದಲು ಸಣ್ಣದಾಗಿ ಬೀಟ್ರೂಟ್ ಹೆಚ್ಚಿಕೊಳ್ಳಿ, ಜೊತೆಗೆ ಈರುಳ್ಳಿ ಹಾಗೂ ಹಸಿಮೆಣಸು ಹೆಚ್ಚಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ಹಿಂಗ್, ಕರಿಬೇವು ಹಾಕಿ
ನಂತರ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ
ನಂತರ ಬೀಟ್ರೂಟ್ ಹಾಕಿ ಮುಚ್ಚಿ ಬೇಯಿಸಿ, ಇದಕ್ಕೆ ಉಪ್ಪು ಹಾಗೂ ಸಾಂಬಾರ್ ಪುಡಿ ಹಾಕಿ
ಕಡೆಗೆ ಕೊತ್ತಂಬರಿ ಹಾಗೂ ಕಾಯಿತುರಿ ಹಾಕಿದ್ರೆ ಪಲ್ಯ ರೆಡಿ