Wednesday, June 29, 2022

Latest Posts

ಮೀನು ಹಿಡಿಯುವ ಬೋಟ್ ನಲ್ಲಿ 150 ಕೋಟಿ ರೂ. ಮೌಲ್ಯದ ಹೆರಾಯಿನ್ ಸಾಗಾಟ: 8 ಮಂದಿ ಪಾಕಿಸ್ತಾನಿಯರ ಸೆರೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮೀನು ಹಿಡಿಯುವ ಬೋಟಿನಲ್ಲಿ 30 ಕೆಜಿ ಹೆರಾಯಿನ್ ಸಾಗಿಸುತ್ತಿದ್ದ 8 ಜನ ಪಾಕಿಸ್ತಾನಿಯರನ್ನು ಭಾರತೀಯ ಭದ್ರತಾ ಪಡೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕರಾವಳಿ ಭದ್ರತಾ ಪಡೆಗಳು ಹಾಗೂ ಗುಜರಾತ್‍ನ ಉಗ್ರ ನಿಗ್ರಹ ದಳದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕುಚ್ ಪ್ರಾಂತ್ಯದ ಜಕ್ಕೂ ಕರಾವಳಿಯಲ್ಲಿ ಬೋಟಿನಲ್ಲಿ  ಹೆರಾಯಿನ್ ಸಾಗಿಸುತ್ತಿದ್ದ ಪಾಕಿಸ್ತಾನಿಯರನ್ನು ಬಂಧಿಸಿದ್ದಾರೆ ಎಂದು ಪೊಲೀಸರ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಬೋಟಿನಲ್ಲಿ 150 ಕೋಟಿ ರೂ.  ಮೌಲ್ಯದ 30 ಕೆಜಿ ಹೆರಾಯಿನ್ ಇಟ್ಟುಕೊಂಡು 8 ಮಂದಿ ಭಾರತೀಯ ಜಲ ಗಡಿಯನ್ನು ದಾಟುತ್ತಿದ್ದರು. ಇದನ್ನು ಗಮನಿಸಿದ ರಾವಳಿ ಭದ್ರತಾ ಪಡೆಗಳು ಹಾಗೂ ಗುಜರಾತ್‍ನ ಉಗ್ರ ನಿಗ್ರಹ ದಳದ ಜಂಟಿ ಕಾರ್ಯಾಚರಣೆ ನಡೆಸಿ 8 ಮಂದಿ ಯನ್ನು ವಶಕ್ಕೆ ಪಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss