Monday, July 4, 2022

Latest Posts

ಹರ್ಷಲ್ ಪಟೇಲ್ ಬೊಂಬಾಟ್ ಬೌಲಿಂಗ್: ಬೆಂಗಳೂರು ಗೆಲುವಿಗೆ 160 ರನ್​ಗಳ ಟಾರ್ಗೆಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್‌ 14 ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ 160 ರನ್​ಗಳ ಟಾರ್ಗೆಟ್ ನೀಡಿದೆ.
ಮುನ್ನ ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ, ರೋಹಿತ್ ಶರ್ಮಾ ಹಾಗು ಕ್ರಿಸ್ ಲಿನ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ವೇಳೆ ಕ್ರಿಸ್ ಲಿನ್ ನೀಡಿದ ತಪ್ಪು ರನ್ ಕರೆಯಿಂದ ರೋಹಿತ್ ಶರ್ಮಾ (19) ರನೌಟ್ ಆದರು.
ಈ ವೇಳೆ ಕ್ರೀಸ್​ಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಶುಭಾರಂಭ ಮಾಡಿದರು. ಅಲ್ಲದೆ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 41 ಕ್ಕೆ ತಂದು ನಿಲ್ಲಿಸಿದರು. ಬಳಿಕ ಸೂರ್ಯಕುಮಾರ್ ಜೊತೆಗೂಡಿ ರನ್​ ಗತಿ ಹೆಚ್ಚಿಸಿದ ಲಿನ್ ಹತ್ತು ಓವರ್​ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 86 ಕ್ಕೆ ತಂದು ನಿಲ್ಲಿಸಿದರು.
11ನೇ ಓವರ್​ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್​ರನ್ನು (31) ಔಟ್​ ದರು. ಬಳಿಕ 35 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಿಡಿಸಿ ಅಪಾಯಕಾರಿಯಾಗಿ ಪರಿಣಮಿಸಿದ್ದ ಕ್ರಿಸ್ ಲಿನ್ (49) ಅವರನ್ನು ಅರ್ಧಶತಕ ಅಂಚಿನಲ್ಲಿ ಔಟ್ ಮಾಡುವಲ್ಲಿ ಸುಂದರ್ ಯಶಸ್ವಿಯಾದರು.
ಈ ಹಂತದಲ್ಲಿ ಜೊತೆಗೂಡಿದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪರಿಣಾಮ 15 ಓವರ್ ಮುಕ್ತಾಯದ ವೇಳೆ ತಂಡದ ಮೊತ್ತ 130 ಗಡಿಗೆ ಬಂದು ನಿಂತಿತು.
16ನೇ ಓವರ್​ನಲ್ಲಿ ಹರ್ಷಲ್ ಪಟೇಲ್ ಎಸೆದ ಸ್ಪೋ ಫುಲ್​ಟಾಸ್ ಬಾಲ್​ನ್ನು ಗುರುತಿಸುವಲ್ಲಿ ಎಡವಿದ ಹಾರ್ದಿಕ್ ಪಾಂಡ್ಯ (13) ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ಕಿಶನ್ (28) ಅವರನ್ನು ಎಲ್​ಬಿ ಬಲೆಗೆ ಬೀಳಿಸಿದ ಹರ್ಷಲ್ ಪಟೇಲ್ ಆರ್​ಸಿಬಿಗೆ ಮತ್ತೊಂದು ಯಶಸ್ಸು ತಂದುಕೊಟ್ಟರು.
ಬಳಿಕ ಕೃನಾಲ್ ಪಾಂಡ್ಯ (7) ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪೊಲಾರ್ಡ್ (7) ಬಾರಿಸಿದ ಚೆಂಡನ್ನು ಬೌಂಡರಿ ಲೈನಲ್ಲಿ ವಾಷಿಂಗ್ಟನ್ ಸುಂದರ್ ಹಿಡಿದರು.
ಈ ಮೂಲಕ ಮುಂಬೈ ಇಂಡಿಯನ್ಸ್​ 9 ವಿಕೆಟ್ ಕಳೆದುಕೊಂಡು 159 ರನ್​ಗಳಿಸಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 4 ಓವರ್​ನಲ್ಲಿ 27 ರನ್​ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು. ಹಾಗೆಯೇ ಚೊಚ್ಚಲ ಪಂದ್ಯವಾಡಿದ ಕೈಲ್ ಜೇಮಿಸನ್ 4 ಓವರ್​ನಲ್ಲಿ 27 ರನ್​ ನೀಡಿ 1 ವಿಕೆಟ್ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss