Sunday, April 18, 2021

Latest Posts

ದಾಸವಾಳ ಎಲೆ ಸೌಂದರ್ಯಕ್ಕೆ ಮಾತ್ರವಲ್ಲ, ಈ ರೀತಿ ಬಳಸಿದರೆ ಆರೋಗ್ಯವೂ ವೃದ್ಧಿಸುತ್ತದೆ! ಹೇಗೆ ನೋಡಿ..

ದಾಸವಾಳ ಪ್ರತಿಯೊಬ್ಬರ ಮನೆಯಲ್ಲಿಯೂ ಬಿಡುವಂತಹ ಸಾಮಾನ್ಯ ಹೂವು. ಇದಕ್ಕೇನು ಹೆಚ್ಚಿಗೆ ಜಾಗ ಬೇಡ. ಅಂಗೈ ಅಗಲ ಜಾಗದಲ್ಲಿಯೇ ದಾಸವಾಳ ಗಿಡ ಮಾಡಬಹುದು. ತುಂಬಾ ಜನರ ಮನೆಯಲ್ಲಿ ಈ ಹೂವಿನ ಗಿಡ ಇದೆ. ಆದರೆ ಇದರ ಉಪಯೋಗದ ಬಗ್ಗೆ ತಿಳಿದಿಲ್ಲ. ದಾಸವಾಳ ಎಲೆ ಸೌಂದರ್ಯ ವೃದ್ಧಿಗೆ ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಉಪಯೋಗಕಾರಿ…

ದೇಹದ ಉಷ್ಣತೆ:
ದೇಹದ ಉಷ್ಣತೆ ಹೆಚ್ಚಾದರೆ ದಾಸವಾಳದ ಹೂವು ಅಥವಾ ಅದರ ಎಲೆಯನ್ನು ನೀರಿನಲ್ಲಿ ಹಾಕಿ ಕೈಯಿಂದ ಸರಿಯಾಗಿ ಕಿವುಚಿಕೊಳ್ಳಬೇಕು. ಅದರಲ್ಲಿ ಇರುವ ಲೋಳೆ ಅಂಶ ನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆ ನೀರನ್ನು ದಿನಕ್ಕೆ ಮೂರು ಸಾರಿ ಸೇವಿಸಿದರೆ ದೇಹದ ಉಷ್ಣತೆ ಕಡಿಮೆ ಆಗುತ್ತದೆ.

ಹೊಟ್ಟು:
ತಲೆಯಲ್ಲಿ ವಿಪರೀತ ಹೊಟ್ಟು ಆದಾಗ ದಾಸವಾಳದ ಎಲೆಯನ್ನು ವಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ಹುಳಿ ಮಜ್ಜಿಗೆಯನ್ನು ಸೇರಿಸಿಕೊಂಡು ತಲೆಗೆ ಹಚ್ಚಿ ಒಂದು ತಾಸಿನ ನಂತರ ತಲೆ ತೊಳೆದುಕೊಂಡರೆ ಹೊಟ್ಟು ನಿವಾರಣೆಯಾಗುತ್ತದೆ.

ಕೂದಲು:
ಕೂದಲು ಕಪ್ಪಾಗಬೇಕೆಂದರೆ ದಾಸವಾಳದ ಎಲೆಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ಅದನ್ನು  ಶೋಧಿಸಿ ಇಟ್ಟುಕೊಳ್ಳಬೇಕು. ಅದನ್ನು ದಿನವೂ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಮತ್ತು ಸೊಂಪಾಗಿ ಬೆಳೆಯುತ್ತದೆ.

ಮಲಬದ್ಧತೆ:
ದಾಸವಾಳದ ಎಲೆಯನ್ನು ಲಿಂಬುವಿನ ಜೊತೆ ಸೇರಿಸಿ ಅದನ್ನು ಜಜ್ಜಿ, ರಸ ತೆಗೆದು ಅದನ್ನು ಮಕ್ಕಳಿಗೆ ಕುಡಿಸಿದರೆ ಮಲ ಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಬಾಯಿ ಹುಣ್ಣು:
ಬಾಯಿಯಲ್ಲಿ ಆಗುವ ಹುಣ್ಣನ್ನು ತಡೆಯಲು ದಾಸವಾಳ ಎಲೆ ರಾಮಬಾಣ. ದಾಸವಾಳ ಎಲೆಯನ್ನು ಜಗಿದು ಸೇವಿಸುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

ಸುಟ್ಟ ಗಾಯ:
ದಾಸವಾಳದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ, ಸುಟ್ಟ ಜಾಗದಲ್ಲಿ ಇಡುವುದರಿಂದ ಉರಿ ಕಡಿಮೆ ಆಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss