ಹೈಕೋರ್ಟ್ ನಿಂದ ಎಸಿಬಿ ರದ್ದು: ಲೋಕಾಯುಕ್ತಕ್ಕೆ ಮತ್ತೆ ಬಲ ಬಂತು ಎಂದ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ

ಹೊಸದಿಗಂತ ವರದಿ, ಮೈಸೂರು:

ಮೂರು ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದಾರೆ. ಭ್ರಷ್ಟರಿಗೆ ಮಣೆ ಹಾಕ್ತಾರೆ. ಹಾಗಾಗಿ ಮೂರು ಪಕ್ಷದವರು ಲೋಕಾಯುಕ್ತ ಸಂಸ್ಥೆಗೆ ವಿರೋಧಿಯಾಗಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಿಡಿಕಾರಿದರು.
ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯ ಕಾರಣದಿಂದ ಗಿಮಿಕ್ ಮಾಡ್ತಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್ ಮೊರೆ ಹೋದರೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ. ಚುನಾವಣೆ ಸಮಿಪಿಸುತ್ತಿರುವ ಹಿನ್ನಲೆಯಲ್ಲಿ ಎಸಿಬಿ ರದ್ದು ಪಡಿಸಿರುವ ವಿರುದ್ಧ ನೇರವಾಗಿ ಅಪೀಲು ಹೋಗ್ತಿಲ್ಲ. ಹಿಂಬಾಲಕರು ಹಿಂಬಾಗಿಲ ಮೂಲಕ ಸುಪ್ರೀಂಕೋರ್ಟ್ ಮೊರೆ ಹೋಗಬಹುದು, ಅದಕ್ಕೆ ಅವಕಾಶ ಇದೆ. ಸದ್ಯಕ್ಕೆ ಚುನಾವಣೆ ಇರುವ ಕಾರಣ ಗೌಣವಾಗಿದ್ದಾರೆ ಎಂದರು.
ಹೈಕೋರ್ಟ್ ಎಸಿಬಿ ರದ್ದುಪಡಿಸಿರುವುದರಿಂದ ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ. ಮೂರು ಪಕ್ಷದಲ್ಲೂ ಕೂಡ ಈ ತೀರ್ಪುನ್ನ ವಿರೋಧಿಸಬಹುದು. ಕಾರಣ ಲೋಕಾಯುಕ್ತ ಇದ್ದ ವೇಳೆ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ ಮೇಲೆ, ಅಧಿಕಾರಿಯ ಮೇಲೆ ಕ್ರಮ ಜರುಗಿಸರಲಿಲ್ಲ. ಲೋಕಾಯುಕ್ತಕ್ಕೆ ಸ್ವಾತಂತ್ರ÷್ಯವಾದ ಅಧಿಕಾರ ಹಾಗೂ ಸವಲತ್ತುಗಳನ್ನ ನೀಡಬೇಕು. ಈ ಮೂಲಕ ಲೋಕಾಯುಕ್ತವನ್ನ ಬಲ ಪಡಿಸಬೇಕು ಎಂದು ಆಗ್ರಹಿಸಿದರು.
ಎಸಿಬಿಯಲ್ಲಿ ಈವರಗೆ ಸಾವಿರಾರು ಕೇಸ್ ಗಳು ದಾಖಲಾಗಿವೆ. ಆದರೆ ಯಾರಿಗೂ ಶಿಕ್ಷೆ ಆಗಿಲ್ಲ ಎಂಬುದೇ ಬೇಸರ. ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಶಿಕ್ಷಯೇ ಆಗಿಲ್ಲ. ಮಂತ್ರಿ ಇರಲಿ, ಒಬ್ಬ ಶಾಸಕನನ್ನು ಕೂಡ ಎಸಿಬಿ ವಿಚಾರಣೆ ಮಾಡಿಲ್ಲ. ನಮ್ಮ,ನಿಮ್ಮಂತವರು ತಪ್ಪು ಮಾಡಿದರೆ ಹೀಗೆ ನಡೆದುಕೊಳ್ಳುತ್ತಿದ್ದಾರಾ? ಸರ್ಕಾರಿ ಅಧಿಕಾರಿಗಳು ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಕೇಳುತ್ತಾರೆ. ಇದು ಬ್ರಿಟಿಷ್ ಆಡಳಿತದ ಕಾನೂನು. ಅಂದಿನ ಬ್ರಿಟಿಷರು ತಮ್ಮ ಪ್ರಾಬಲ್ಯಕ್ಕಾಗಿ ಈ ನಿಯಮ ಜಾರಿಗೆ ತಂದಿದ್ದರು. ಆದರೆ ಇಂದು ನಮ್ಮದೇ ಸರ್ಕಾರ ಇರುವಾಗ ಸರ್ಕಾರದ ಅನುಮತಿ ಯಾಕೆ ಬೇಕು.? ಸಾಮಾನ್ಯ ಜನರನ್ನ ನೇರವಾಗಿ ತನಿಖೆ ಮಾಡುತ್ತಾರೆ, ಆದರೆ ಅಧಿಕಾರಿಗಳನ್ನ ತನಿಖೆ ಮಾಡಬೇಕಾದರೆ ಸರ್ಕಾರದ ಅನುಮತಿ ಏಕೆ..? ಎಂದು ಟೀಕಿಸಿದರು.
ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸುತ್ತಾರೆ. ಭ್ರಷ್ಟರಿಗೆ, ಭ್ರಷ್ಟಾಚಾರಿಗೆ ಜೈಕಾರ ಹಾಕ್ತಾರೆ. ಏರ್ಪೋರ್ಟ್ ಹೊರಗೆ ಹೋಗಿ ಸ್ವಾಗತ ಕೋರುತ್ತಾರೆ. ಸದ್ಯ ಜನರ ಮನಃ ಸ್ಥಿತಿ ಹಣ, ಅಧಿಕಾರದ ಹಿಂದೆ ಸಾಗಿದೆ. ಅದಕ್ಕಾಗಿ ಹಂಬಲಿಸುತ್ತಾರೆ ಹಾತೋರಿಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾವಿರರು ಕೋಟಿ ನಷ್ಠ ಉಂಟಾಗಿದೆ. ಆದ್ರೇ 40% ಕಮಿಷನ್ ಆಸೆಗಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ ಎಂದು ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!