ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಪಾಲಿಟಿಕಲ್ ಜಡ್ಜ್ಮೆಂಟ್ ಆಗಿದ್ದು ಸಿಎಂ ಸಿದ್ಧರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಇತರೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ನ್ಯಾಯಾಲಯದ ಬಗ್ಗೆ ನನಗೆ ಗೌರವ ಇದೆ. ನಾನು ಬಾಯಿ ತಪ್ಪಿ ಅಂದಿರಬಹುದು ಅಷ್ಟೇ ಕೋರ್ಟ್ ತೀರ್ಪಿನ ಬಗ್ಗೆ ಜಮೀರ್ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದರು.
ನಿನ್ನೆ ಹೈಕೋರ್ಟ್ ನಲ್ಲಿ ಜಡ್ಜ್ಮೆಂಟ್ ಬಂದಿತ್ತು. ನಮ್ಮ ಪ್ರಾಸಿಕ್ಯೂಷನ್ ಅನುಮತಿ ರದ್ದು ಮಾಡಿ ಅಂತ ಕೇಳಿದ್ವಿ. ಅದನ್ನ ರದ್ದು ಮಾಡಿ ಅಂತ ಕೇಳಿದಾಗ ಹೈಕೋರ್ಟ್ ತನಿಖೆ ಮಾಡಿ ಅಂತ ಆದೇಶ ನೀಡಿತ್ತು. ಅದಕ್ಕೆ ನಾನು ಸ್ವಾಗತ ಮಾಡಿ ತನಿಖೆ ನಾವು ಎದುರಿಸುತ್ತೇವೆ ಅಂತ ಹೇಳಿ ಹೈಕೋರ್ಟ್ ಜಡ್ಜ್ಮೆಂಟ್ ಬಂದ ಹಿನ್ನೆಲೆಯಲ್ಲಿ ಪೊಲಿಟಿಕಲ್ ರಾಜಕೀಯ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದೆ. ಹಾಗಾಗಿ ನಾನು ಬಾಯಿ ತಪ್ಪಿ ಹೇಳಿರಬಹುದು ಹೊರತು ಉದ್ದೇಶಪೂರ್ವಕವಾಗಿ ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.