Thursday, August 18, 2022

Latest Posts

ಆಪ್ ಮೂಲಕ ಹೈಟೆಕ್ ವೇಶ್ಯಾವಾಟಿಕೆ: ಇಬ್ಬರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ಮೈಸೂರು:

ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನು ಸೆಳೆದು ಸೆಳೆದು ಹೈಟೆಕ್ ಆಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಮೈಸೂರಿನ ಮೇಟಗಳ್ಳಿ ಠಾಣೆ ಪೊಲೀಸರು ಭೇದಿಸಿ, ಇಬ್ಬರನ್ನು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ಮೂಲದ ಸುಮ(32) ಹಾಗೂ ಸಿದ್ದರಾಜು ಬಂಧಿತರು.

ಆರೋಪಿ ಸುಮ ಮೈಸೂರಿನ ಕುಂಬಾರ ಕೊಪ್ಪಲಿನ ಕಿಡಿಗಣ್ಣಮ್ಮನ ಬಡಾವಣೆಯಲ್ಲಿ ಮನೆ ಮಾಡಿಕೊಂಡು ಈಕೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಈಕೆಯೊಂದಿಗೆ ಸಿದ್ದರಾಜು(37) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಆರೋಪಿ ಸುಮಾ ಟಿಕ್‌ಟಾಕ್, ರೀಲ್ಸ್ ಸೇರಿ ಮತ್ತಿತರ ಸಾಮಾಜಿಕ ಜಾಲದಲ್ಲಿ ಆಕ್ಟಿಂಗ್ ವಿಡಿಯೋ ಆಪ್ ಮೂಲಕ ಭಾರೀ ಸಕ್ರಿಯರಾಗಿದ್ದು, ಈ ಮೂಲಕವೇ ಯುಕರನ್ನು ತನ್ನೆಡೆಗೆ ಸೆಳೆಯುತ್ತಿದ್ದಳು. ಆಪ್ ಮೂಲಕ ಡೀಲ್ ಕುದುರಿಸುತ್ತಿದ್ದಳು.

ಈ ಹಿಂದೆ ಕೆಲವೆಡೆ ಪೊಲೀಸರು ವೇಶ್ಯಾವಾಟಿಕೆ ಸಂಬoಧ ದಾಳಿ ನಡೆಸಿದಾಗ ಈಕೆ ಸಿಕ್ಕಿ ಬಿದ್ದಿದ್ದು, ಪೊಲೀಸರ ಬಳಿ ತಾನು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ರಕ್ಷಿತ ಮಹಿಳೆ ಎಂದು ಪರಿಗಣಿಸಿ, ಬಿಡುಗಡೆ ಮಾಡಿದ್ದರು. ಈಗ ಆಕೆಯೇ ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!