ಬಿಜೆಪಿ ಸರ್ಕಾರ ಜಾರಿಗೆ ತಂದ ಹಿಜಾಬ್ ನಿಷೇಧ ಸಹಿತ ಎಲ್ಲಾ ಕಾನೂನು, ಆದೇಶಗಳನ್ನು ಪರಿಶೀಲಿಸಿ ನಿರ್ಧಾರ: ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹಿಜಾಬ್ ನಿಷೇಧ (Hijab Ban) ಸೇರಿದಂತೆ ಎಲ್ಲಾ ಕಾನೂನು ಮತ್ತು ಆದೇಶಗಳನ್ನು ಕಾಂಗ್ರೆಸ್ ಸರ್ಕಾರ ಪರಿಶೀಲಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬುಧವಾರ ಹೇಳಿದ್ದಾರೆ.

ನಮ್ಮ ವರ್ಚಸ್ಸು ಮತ್ತು ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಧಕ್ಕೆ ತರುವ ಮಸೂದೆಗಳನ್ನು ನಾವು ಹಿಂಪಡೆಯುತ್ತೇವೆ. ನಾವು ಸಂವಿಧಾನದ ವ್ಯಾಪ್ತಿಯಲ್ಲಿರುವ ಎಲ್ಲಾ ಕಾನೂನುಗಳನ್ನು ಪರಿಶೀಲಿಸುತ್ತೇವೆ ಮತ್ತು ಅಗತ್ಯವಿಲ್ಲದ ಕಾನೂನುಗಳನ್ನು ಹಿಂಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.

ಹಿಜಾಬ್‌ ಸೇರಿದಂತೆ ಸರ್ಕಾರದ ಆದೇಶಗಳನ್ನು ನಾವು ಮರುಪರಿಶೀಲಿಸುತ್ತೇವೆ ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಾಗ್ಪುರದಲ್ಲಿ ಕುಳಿತಿರುವ ಜನರ ಆದೇಶದ ಮೇರೆಗೆ ಪರಿಚಯಿಸಲಾದ ಯಾವುದೇ ಮಸೂದೆಗಳು ಅಥವಾ ಕಾನೂನುಗಳು ನಮಗೆ ಬೇಡ. ಬಿಜೆಪಿ ಆಡಳಿತದಲ್ಲಿ ಪಠ್ಯಪುಸ್ತಕಗಳಲ್ಲಿ ಮಾಡಿರುವ ಬದಲಾವಣೆಗಳನ್ನೂ ಪರಿಶೀಲಿಸುತ್ತೇವೆ. ಅವರು ಇತಿಹಾಸವನ್ನು ತಿರುಚಿದ್ದಾರೆ, ನಾವು ಅದನ್ನು ಸರಿಪಡಿಸುತ್ತೇವೆ ಎಂದು ಖರ್ಗೆ ಹೇಳಿದರು.

ಗೋಹತ್ಯೆ ನಿಷೇಧ ಕಾನೂನು, ಮತಾಂತರ ತಡೆ ಕಾನೂನು ಮತ್ತು ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರಿಂದ ಈ ಹೇಳಿಕೆ ಮೂಡಿಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!