ಹಿಜಾಬ್ ವಿವಾದ: ಫೆ. 16 ರ ವರೆಗೆ ಪದವಿ ಕಾಲೇಜುಗಳಿಗೆ ರಜೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹಿಜಾಬ್ ವಿವಾದ ಹಿನ್ನೆಲೆ ಈಗಾಗಲೇ ರಜೆ ಘೋಷಿಸಿರುವ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳಿಗೆ ಫೆ. 16 ರ ವರೆಗೆ ರಜೆಯನ್ನು ವಿಸ್ತರಣೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಈ ಕುರಿತು ಆದೇಶ ಹೊರಡಿರುವ ಇಲಾಖೆ, ಸಕಾರಿ- ಅನುದಾನಿತ-ಖಾಸಗಿ ಪದವಿ ಕಾಲೇಜಿಗಳಿಗೆ ರಜೆ ಘೋಷಣೆ ಮಾಡಿದೆ. ಆದರೆ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿದೆ ಎಂದು ತಿಳಿಸಿದೆ. ಮತ್ತು ಎಲ್ಲಾ ತರಗತಿಗಳು ಆನ್ ಲೈನ್ ಮೂಲಕ ನಡೆಸಲು ಸೂಚಿಸಿದೆ.

ಬುಧವಾರದವರೆಗೆ ಕಾಲೇಜುಗಳು ರಜೆ ಘೋಷಣೆ ಮಾಡಲಾಗುತ್ತಿದ್ದು, ಮುಂದಿನ ಪರಿಸ್ಥಿತಿ ನೋಡಿಕೊಂಡು ಮತ್ತೆ ನಿರ್ಧಾರ ಮಾಡಲಾಗುವುದು. ಅದರಂತೆ PUC ಇಂದ ಡಿಗ್ರಿ ಹಾಗೂ ಪೋಸ್ಟ್ ಡಿಗ್ರಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!