ಹೊಸದಿಗಂತ ವರದಿ, ಕಾರವಾರ:
ಹಿಜಾಬ್ ಸಮರ್ಥನೆ ಮಾಡುವವರು ಬುರ್ಕಾ ಸಹಿತ ಮತೀಯ ಕುರುಹುಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿರುವ ಚೀನಾ, ಫ್ರಾನ್ಸ್ ಸಹಿತ 11 ದೇಶಗಳ ನಿರ್ಧಾರವನ್ನು ನೋಡಬೇಕು ಎಂದು ಭಾಜಪಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ. ಅವರು ನಮ್ಮಲ್ಲಿ ಚೀನಾವನ್ನು ಸಮರ್ಥಿಸುವ ಪ್ರಗತಿಪರರು ಇದ್ದಾರೆ. ಇವರೆಲ್ಲ ಇಲ್ಲಿ ಹಿಜಾಬ್ ಸಮರ್ಥನೆಯನ್ನು ಮಾಡುತ್ತಿದ್ದಾರೆ. ಯಾಕೆ ತಮ್ಮ ಪ್ರೀತಿಯ ದೇಶ ಚೀನಾ ತಮ್ಮಲ್ಲಿ ಬುರ್ಖಾ ಹಿಜಾಬ್ ನಿಷೇಧ ಮಾಡಿದೆ. ಅಲ್ಲಿ ಮದರಸಾಕ್ಕೆ ಅವಕಾಶ ಇಲ್ಲ ಏಕೆ ಎನ್ನುವುದರ ಬಗ್ಗೆ ಯೋಚನೆ ಮಾಡಬೇಕು ಎಂದರು.
ಪಾಕಿಸ್ತಾನವೂ ಹಿಜಾಬ್, ಬುರ್ಖಾ ಕಡ್ಡಾಯ ಮಾಡಿಲ್ಲ ಎನ್ನುವುದನ್ನು ಗಮನಿಸಬೇಕು ಎಂದರು.
ಶಾಲೆಗಳು ವಿದ್ಯಾಕೇಂದ್ರಗಳು. ಇಲ್ಲಿ ಮತೀಯತೆ ಬಿತ್ತಬಾರದು.ಶಾಲಾ ಸಮವಸ್ತ್ರಗಳು ಈ ಕಾರಣಕ್ಕಾಗಿಯೇ ಇವೆ. ಹಿಜಾಬ್ ಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಹಿಜಾಬ್ ಗಾಗಿ ಪಟ್ಟು ಹಿಡಿದರ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ನಿರ್ಧಾರವನ್ನು ಪಾಲಿಸಬೇಕು. ಇಲ್ಲದಿದ್ದರೆ ಚೀನಾ ಏನು ಮಾಡಿದೆಯೋ ಇಲ್ಲೂ ಅದೇ ಆಗುತ್ತೆ ಎಂದರು.
ಮದರಸಾ ನಿಷೇಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರವಿ, ಮದರಸಾಗಳಲ್ಲಿ ಎಂತಹ ಶಿಕ್ಷಣ ಸಿಗುತ್ತೆ ಎನ್ನುವುದು ಗೊತ್ತೇ ಇದೆ. ಚೀನಾ ಸುಮ್ಮನೆ ನಿಷೇಧ ಮಾಡಿಲ್ಲ. ಇಲ್ಲೂ ದೇಶದ್ರೋಹಕ್ಕೆ ಅಲ್ಲಿಂದ ಕುಮ್ಮಕ್ಕು ಸಿಕ್ಕರೆ ಬ್ಯಾನ್ ಮಾಡಲೇಬೇಕಾಗುತ್ತದ