Friday, August 12, 2022

Latest Posts

ಹೆಚ್ಚಾಗಲಿದೆ ತಾಜ್‌ಮಹಲ್ ಪ್ರವೇಶ ಶುಲ್ಕ.. ಹೋಗೋರಿದ್ರೆ ಈಗಲೇ ಹೋಗಿಬಿಡಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರೇಮ ಸ್ಮಾರಕ ತಾಜ್ ಮಹಲ್ ನೋಡೋಕೆ ಹೊರಟಿದ್ದೀರಾ? ಸಾಧ್ಯವಾದಷ್ಟು ಶೀಘ್ರದಲ್ಲೇ ತಾಜ್‌ಮಹಲ್ ನೋಡಿ ಬಂದುಬಿಡಿ..
ಹೀಗೆ ಹೇಳುತ್ತಿರುವುದಕ್ಕೆ ಕಾರಣ ಇದೆ, ಶೀಘ್ರವೇ ತಾಜ್‌ಮಹಲ್‌ನ ಪ್ರವೇಶ ಶುಲ್ಕ ಹೆಚ್ಚು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ದೇಶೀಯ ಹಾಗೂ ವಿದೇಶಿಗರಿಗೂ ಟಿಕೆಟ್ ಹೆಚ್ಚಳವಾಗಲಿದೆ. ತಾಜ್ ಮಹಲ್‌ನ ಎಂಟ್ರಿ ಫೀ ರೂ.50 ಇದ್ದು, ಶೀಘ್ರವೇ 80ರೂ. ಆಗಲಿದೆ. ವಿದೇಶಿಗರಿಗೆ ಪ್ರವೇಶ ಶುಲ್ಕ 1100 ಇದ್ದು, ಶೀಘ್ರವೇ 1200 ಆಗಲಿದೆ.
ಮುಖ್ಯ ದ್ವಾರದೊಳಗೆ ಪ್ರವೇಶಿಸಲು ಇಚ್ಛಿಸುವವರು ಮತ್ತೆ 200ರೂ. ನೀಡಿ ಒಳಗೆ ತೆರಳಬಹುದು ಎಂದು ಅಗ್ರಾ ಡೆವಲಪ್‌ಮೆಂಟ್ ಅಥಾರಿಟಿ ಮಾಹಿತಿ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss