ಪ್ರಾಚೀನ ಅಡುಗೆ ತಂತ್ರವನ್ನು ಪುನರುಜ್ಜೀವನಗೊಳಿಸಲು ಇಂಜಿನಿಯರ್‌ ಹುದ್ದೆ ತ್ಯಜಿಸಿದ್ದ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆತ ವೃತ್ತಿಯಲ್ಲಿ ಇಂಜಿನಿಯರ್‌, ಭಾರತದಲ್ಲಿ ಅಲ್ಲ ಅಮೆರಿಕದಲ್ಲಿ ಲಕ್ಷ ಲಕ್ಷ ಡಾಲರ್‌ ಹಣ ಸಂಪಾದಿಸುವ ದಾರಿಯಿದ್ದರೂ ಆತನ ಮನಸ್ಸು ಬಯಸುತ್ತಿದ್ದು ಮಾತ್ರ ಬೇರೆಯದ್ದೇ ಆಗಿತ್ತು. ಹಿಮಾಚಲ ಪ್ರದೇಶದ ಕಾಂಗ್ರಾದ ಇಂಜಿನಿಯರ್ ಆಗಿರುವ ಹಿಮಾಂಶು ಸುದ್ ಅವರ ಆಲೋಚನೆಯಂತೆ ಅವರ ತಲೆಯಲ್ಲಿದ್ದುದು ಅಸ್ತಿತ್ವದ ಚಿಂತನೆಯನ್ನು ಉಳಿಸಿಕೊಳ್ಳುವದಾಗಿತ್ತು. ಇದೇ ಆತನನ್ನು ಇಂಜಿನಿಯರಿಂಗ್ ವೃತ್ತಿಯಿಂದ ಕೆಳಗಿಳಿದು ಮತ್ತೆ ಭಾರತದಲ್ಲಿ ಉಳಿದು ಹಿಮಾಚಲದ ಪ್ರಾಚೀನ ಅಡಿಗೆ ತಂತ್ರ ಪುನರುಜ್ಜೀವನಗೊಳಿಸಲು  ಪ್ರೇರೇಪಿಸಿತು.

ಒಂದು ವರ್ಷ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ‌ ಹಿಮಾಂಶು 2009 ರಲ್ಲಿ, ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಬಂದು ತಾವು ಬೆಳೆದ ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸುವುದರಲ್ಲಿ ಬಹಳಷ್ಟು ಅರ್ಥವಿದೆ ಎಂಬುದನ್ನು ಮನಗಂಡರು. ಆ ಆಲೋಚನೆಯಿಂದ ಹುಟ್ಟಿಕೊಂಡಿದ್ದೇ ʻಹಿಮಾಚಲಿ ರಸೋಯ್ʼ ಜನರಿಂದ ಹೆಚ್ಚು ಮೆಚ್ಚುಗೆ ಪಡೆದ ಸಾಂಪ್ರದಾಯಿಕ ಪ್ರಾಚೀನ ‘ಧಾಮ್’ ಅಡುಗೆಯನ್ನು ಅನುಭವಿಸುವ ಸ್ಥಳ.

The traditional dham cooked in Himachal, made with lentils, masalas, spices

ಅಮೆರಿಕಾದಿಂದ ಬಂದ ಬಳಿಕ ಏಕಾಏಕಿ ಈ ರೆಸ್ಟೋರೆಂಟ್‌ ಸ್ಥಾಪಿಸಿಲ್ಲ ಬದಲಿಗೆ ‘ವೇಕ್ ಅಂಡ್ ಬೇಕ್ ಕೆಫೆ’ ಶಿಮ್ಲಾದ ಮೊದಲ ಕೆಫೆಗಳಲ್ಲಿ ಒಂದು. ಶಿಮ್ಲಾ ತನ್ನ ಔಪಚಾರಿಕ ಊಟದ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಕೆಫೆ ಅಭಿವೃದ್ಧಿಯಾಗುತ್ತಿದ್ದಂತೆ ಹಿಮಾಂಶು ಗಮನಕ್ಕೆ ಬಂದ ಅಂಶವೇ ಹಿಮಾಚಲದ ಪ್ರಾಚೀನ ಪಾಕಪದ್ದತಿಯನ್ನು ಸಂರಕ್ಷಿಸುವುದು. ಈ ಚಿಂತನೆಯು ಅಂತಿಮವಾಗಿ 2015 ರಲ್ಲಿ ಹಿಮಾಚಲಿ ರಸೋಯ್ ಅನ್ನು ಪ್ರಾರಂಭಿಸಲು ಕಾರಣವಾಯಿತು. ಕಾಂಗ್ರಾದಿಂದ ಬಂದವನಾಗಿರುವುದರಿಂದ ಸಂಪ್ರದಾಯ ಮತ್ತು ಸಂಸ್ಕೃತಿಯೊಂದಿಗೆ ನನ್ನ ಬೇರುಗಳು ತುಂಬಾ ಬಲವಾಗಿವೆ ಎಂದು ಹಿಮಾಂಶು ವಿವರಿಸುತ್ತಾರೆ. ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ಹಲವಾರು ತಲೆಮಾರುಗಳ ಹಿಂದಿನ ‘ಧಾಮ್’ ಪಾಕವನ್ನು ಪುನರುಜ್ಜೀವನಗೊಳಿಸಲು ಬಯಸಿದ್ದರು.

‘ಧಾಮ್’ ಅಂದರೆ ಹಲವು ರೀತಿಯ ಭಕ್ಷ್ಯಗಳ ತಟ್ಟೆ ಎಂದರ್ಥ. ಇದನ್ನು ಕಲಿತು ಅರ್ಥಮಾಡಿಕೊಳ್ಳಲು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಧಾಮ್ ಬೇಯಿಸುವುದು ಹೇಗೆ ಎಂಬ ಜ್ಞಾನವನ್ನು ರವಾನಿಸುವ ಬೋಟಿಸ್ ಎಂಬ ಬ್ರಾಹ್ಮಣ ಅಡುಗೆಯವರ ಸಮುದಾಯವಿದೆ ಅವರೊಂದಿಗೆ ಆರು ತಿಂಗಳು ಕೆಲಸ ಮಾಡಿರುವುದಾಗಿ ಹಿಮಾಂಶು ಹೇಳುತ್ತಾರೆ.ಧಾಮ್‌ ತಯಾರಿಸುವ ಪೂರ್ವಭಾವಿ ಕೆಲಸವು ಹಿಂದಿನ ರಾತ್ರಿ ಪ್ರಾರಂಭವಾಗುತ್ತದೆ. ಮಸೂರವನ್ನು ನೆನೆಸುವುದು, ಮಸಾಲೆಗಳನ್ನು ತಯಾರಿಸುವುದು ಮತ್ತು ಮಸಾಲೆಗಳನ್ನು ಮಿಶ್ರಣ ಮಾಡುವುದು. ಮರುದಿನ ಬೆಳಿಗ್ಗೆ 8.30 ಕ್ಕೆ ಅಡುಗೆ ಮಾಡಲು ಪ್ರಾರಂಭಿಸಿದರೆ ಮಧ್ಯಾಹ್ನದವರೆಗೆ ಕೆಲಸ ಇರುತ್ತದೆ ಎಂದು ತಿಳಿಸಿದರು. ಸಾಂಪ್ರದಾಯಿಕವಾಗಿ ಭೋಜನವನ್ನು ದೇವಿಗೆ ಸಮರ್ಪಿಸುವ ಮೊದಲು ಅದನ್ನು ಸವಿಯಬಾರದು ಎಂಬ ಕಾರಣದಿಂದ ಸುವಾಸನೆ ಮತ್ತು ಪ್ರಮಾಣವನ್ನು ಸರಿಯಾಗಿ ಪಡೆಯುವುದು ಬಹಳ ಮುಖ್ಯ.

ಅಂತಿಮವಾಗಿ ಹಿಮಾಚಲಿ ರಸೋಯಿ ಪ್ರಾರಂಭಾಗುತ್ತದೆ. ಅಲ್ಲಿ ಅತಿಥಿಗಳು ಕಂಗ್ರಿ ಧಾಮ್ ಮತ್ತು ಮಂಡ್ಯಲಿ ಧಾಮ್. ಜೊತೆಗೆ ಅವರು ಸಿಡುವನ್ನು ಬಡಿಸುತ್ತಾರೆ, ಇದು ಆವಿಯಲ್ಲಿ ಬೇಯಿಸಿದ ಗೋಧಿ ಬನ್ ಆಗಿದೆ. ಬಬ್ರೂ-ಇದು ಹುರಿದ ಗೋಧಿ ಬ್ರೆಡ್; ಮತ್ತು ಪಟಾಂಡೆ, ಅಥವಾ ಗೋಧಿ ಪ್ಯಾನ್‌ಕೇಕ್‌ಗಳು. ಪ್ರದೇಶದ ಸಂಸ್ಕೃತಿ ಮತ್ತು ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸಂಗ್ರಹಿಸಲಾಗಿದೆ. ಜನರು ಬೆಳಿಗ್ಗೆ ತುಪ್ಪದೊಂದಿಗೆ ಮೆನುವಿನಲ್ಲಿರುವ ಆಹಾರವನ್ನು ಸವಿಯಬಹುದು. ಹಿಮಾಚಲಿ ರಸೋಯಿ ಪ್ರತಿದಿನ ಕನಿಷ್ಟ 100ಮಂದಿ ಭೇಟಿ ಕೊಡುತ್ತಾರೆ. ನನ್ನ ಕಷ್ಟಕ್ಕೆ ಇಂದು ಫಲ ಸಿಕ್ಕಿದೆ. ಭಾರತದಲ್ಲಿ ಮತ್ತೆ ಉಳಿಯುವ ನನ್ನ ಆಯ್ಕೆಯ ಬಗ್ಗೆ ನನಗೆ ಹೆಮ್ಮೆಯಿದೆ. ಇಂಜಿನಿಯರಿಂಗ್‌ನಲ್ಲಿ ಮುಂದುವರಿದಿದ್ದರೆ ಒಂದು ಯಂತ್ರವಾಗಿರುತ್ತಿದ್ದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!