ಹಿಮಾಚಲ ಪ್ರದೇಶ ಸರಕಾರದಿಂದ ಜನತೆಗೆ ಶಾಕ್: ಡೀಸೆಲ್ ಬೆಲೆ 3 ರೂ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶ ಸರ್ಕಾರವು ಭಾನುವಾರ ಸಚಿವ ಸಂಪುಟ ವಿಸ್ತರಿಸಿದ ಬೆನ್ನಲ್ಲೇ ಡಿಸೇಲ್ ಮೇಲಿನ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ನು ಪ್ರತಿ ಲೀಟರ್‌ಗೆ ಶೇ.6.40 ರಿಂದ ಶೇ.9.96ಕ್ಕೆ ಹೆಚ್ಚಿಸಿದ್ದು, ಇದರಿಂದ ಡೀಸೆಲ್ (Diesel) ಬೆಲೆ ಲೀಟರ್‌ಗೆ 3 ರೂ. ಹೆಚ್ಚಳವಾಗಿದೆ.

ಡೀಸೆಲ್ ಮೇಲಿನ ವ್ಯಾಟ್ ಪ್ರತಿ ಲೀಟರ್‌ಗೆ 4.40 ರೂ. ನಿಂದ 7.40 ರೂ.ಗೆ ಏರಿಕೆಯಾಗಿದೆ. ಹಾಗಾಗಿ 83 ರೂ. ಇದ್ದ ಡೀಸೆಲ್ ಬೆಲೆ 86 ರೂ.ಗಳಿಗೆ ತಲುಪಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು 0.55 ಪೈಸೆಗಳಷ್ಟು ಕಡಿಮೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!