ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ತಂಡಕ್ಕೆ ಸೋಲುಣಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ವಿಜಯ ಹಜಾರೆ ಟ್ರೋಫಿ ಎತ್ತಿ ಹಿಡಿದಿದೆ.
ಭಾನುವಾರ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ವಿಜಯ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ 315 ರನ್ಗಳ ಗುರಿಯನ್ನು ಬೆನ್ನಟ್ಟಿದ ಹಿಮಾಚಲ ಪ್ರದೇಶ 47.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 299 ರನ್ಗಳಿಸಿತ್ತು. ಆದರೆ ಈ ವೇಳೆ ಮಂದ ಬೆಳಕಿನ ಕಾರಣ ಪಂದ್ಯ ಸ್ಥಗಿತಗೊಂಡಿದ್ದು, ವಿಜೆಡಿ ನಿಯಮದನ್ವಯ ಜಯ ಸಾಧಿಸಿ ಚೊಚ್ಚಲ ಡೊಮೆಸ್ಟಿಕ್ ಪ್ರಶಸ್ತಿಯನ್ನು ಹಿಮಾಚಲ ಪ್ರದೇಶ ಎತ್ತಿ ಹಿಡಿಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ತಮಿಳುನಾಡು ತಂಡ ಆರಂಭಿಕ ಆಘಾತ 314 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು.