Wednesday, March 29, 2023

Latest Posts

ಸಾಲುಮರದ ತಿಮ್ಮಕ್ಕ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಹಿಂದಿ ಬಿಗ್ ಬಾಸ್ ಸ್ಪರ್ಧಿ ಪ್ರಿಯಾಂಕಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ಹಿಂದಿ ಬಿಗ್ ಬಾಸ್ ಸೀಸನ್ 16ರ ಸ್ಪರ್ಧಿ ಪ್ರಿಯಾಂಕಾ ಚಹರ್ ಚೌಧರಿ (Priyanka Chahar Choudhary) ಸಾಲುಮರದ ತಿಮ್ಮಕ್ಕ (Saalu Marada Thimmakka) ಅವರ ಆಶೀರ್ವಾದ ಪಡೆದಿದ್ದಾರೆ.

ಬಿಗ್ ಬಾಸ್ (Bigg Boss Hindi 16)ಪ್ರಿಯಾಂಕಾಗೆ ಅವರ ನಟನೆಗೆ ಮತ್ತು ಜೊತೆಗೆ ನೇರ ಮಾತುಗಳಿಂದ ಹೆಚ್ಚು ಪರಿಚಯ. ರಿಯಾಲಿಟಿ ಶೋನಿಂದ ಹೊರಬಂದ ನಂತರ ನಿರಂತರವಾಗಿ ಸುದ್ದಿಯಾಗುತ್ತಲೇ ಇದ್ದಾರೆ ಈ ನಟಿ. ಅವರು ಎಲ್ಲಿಗೆ ಹೋದರೂ, ಕ್ಯಾಮೆರಾದಲ್ಲಿ ಅವರನ್ನು ಗುರುತಿಸುತ್ತಾರೆ.

ಇತ್ತೀಚಿಗೆ ಪ್ರಿಯಾಂಕಾ ಚಹರ್ ಅವರು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗಿಯಾಗಲು ಬಂದಿದ್ದರು. ಈ ವೇಳೆ 110 ವರ್ಷದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರನ್ನ ಭೇಟಿಯಾಗಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ನಟಿಯ ನಡೆ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!