ಹೊಸದಿಗಂತ ಆನ್ ಲೈನ್ ಡೆಸ್ಕ್:
ಹಿಂದಿ ‘ಬಿಗ್ ಬಾಸ್ ಸೀಸನ್ 14’ ರಿಯಾಲಿಟಿ ಶೋ ಗೆ ತೆರೆ ಬಿದ್ದು, ಕಿರುತೆರೆ ನಟಿ ರುಬಿನಾ ದಿಲೈಕ್ ವಿನ್ನರ್ ಆಗಿದ್ದು, ಬಿಗ್ ಬಾಸ್ ಟ್ರೋಫಿ ಜೊತೆಗೆ 36 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.
ಇತರ ಸ್ಪರ್ಧಿಗಳಾದ ರಾಹುಲ್ ವೈದ್ಯ ಹಾಗೂ ನಿಕ್ಕಿ ತಂಬೋಲಿ ಕ್ರಮವಾಗಿ ಮೊದಲನೇ ಮತ್ತು ಎರಡನೇ ರನ್ನರ್ ಅಪ್ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಈ ಬಾರಿ ಬಿಗ್ ಬಾಸ್ ಫಿನಾಲೆಯಲ್ಲಿ ರುಬೀನಾ ಜೊತೆ ರಾಖಿ ಸಾವಂತ್, ನಿಕ್ಕಿ ತಂಬೋಲಿ, ಅಲಿ ಗೊನಿ, ರಾಹುಲ್ ವೈದ್ಯ ತೀವ್ರ ಪೈಪೋಟಿ ನೀಡಿದ್ದರು. ಅಂತಿಮವಾಗಿ ರುಬೀನಾ ಗೆಲುವು ಸಾಧಿಸಿದ್ದಾರೆ.