Monday, August 15, 2022

Latest Posts

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯ:ಸೋಮವಾರಪೇಟೆಯಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ, ಮಾದಾಪುರ:

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಗುರಿಯಾಗಿಸಿಗೊಂಡು ಮತಾಂಧರು ನಡೆಸುತ್ತಿರುವ ಆಕ್ರಮಣಗಳನ್ನು ಖಂಡಿಸಿ ಸೋಮವಾರಪೇಟೆಯಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ರಂಜನ್, ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗೆ ಕೇಂದ್ರ ಸರಕಾರ ಅಗತ್ಯ ಕ್ರಮಕೈಗೊಳ್ಳುವುದರ ಜೊತೆಗೆ ಅಲ್ಲಿನ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯತೆಯಿದೆ ಎಂದರು.
ಬಾಂಗ್ಲಾದೇಶದಲ್ಲಿನ ಬಹುಸಂಖ್ಯಾತರು ಅಲ್ಲಿನ ಹಿಂದೂಗಳನ್ನು ಕಾಣುವ ದೃಷ್ಟಿ ಕೋನ ಬದಲಾಗಬೇಕಿದೆ. ಪ್ರಸ್ತುತ ಮತಾಂಧತೆಯೆನ್ನುವುದು ಇಡೀ ವಿಶ್ವಕ್ಕೇ ಸವಾಲಾಗಿದೆ ಎಂದು ನುಡಿದರು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ದೌರ್ಜನ್ಯಗಳನ್ನು ಹಿಂದೂ ಜಾಗರಣ ವೇದಿಕೆ ಉಗ್ರವಾಗಿ ಖಂಡಿಸುತ್ತದೆ. ಭಾರತದಿಂದಲೇ ಹಲವು ರೀತಿಯ ಸಹಾಯಗಳನ್ನು ಪಡೆದುಕೊಂಡು ಬದುಕಿರುವ ಅಲ್ಲಿನ ಸರಕಾರ ಬಾಂಗ್ಲಾದ ಮುಸ್ಲಿಂ ಮತಾಂಧರ ದುಷ್ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿದ್ದು, ಅಲ್ಲಿನ ಜಿಹಾದಿ ಮತಾಂಧರ ನೀಚ ಕೃತ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿದೆಯೆಂದರು.
ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ದಂಡಾಧಿಕಾರಿಗಳಿಗೆ ಆಗ್ರಹ ಪತ್ರವನ್ನು ನೀಡಲಾಯಿತು., ಇದನ್ನು ಕೇಂದ್ರ ಗೃಹ ಸಚಿವರಿಗೆ ಕಳುಹಿಸಿ ಕೊಡುವುದಾಗಿ ತಹಶೀಲ್ದಾರರು ತಿಳಿಸಿದರು. ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಜಿಲ್ಲಾ ಸಹ ಸಂಪರ್ಕ ಪ್ರಮುಖ ಉಮೇಶ್ ಎಂ.ಬಿ, ಸೋಮವಾರಪೇಟೆ ತಾಲೂಕು‌ ಅಧ್ಯಕ್ಷ ಸುನಿಲ್, ಸಂ. ಕಾರ್ಯದರ್ಶಿ ವಿನು, ತಾಲೂಕು ಪ್ರಚಾರ ಪ್ರಮುಖ ಹೇಮಂತ್ ಬಜೆಗುಂಡಿ, ನಿಧಿ ಪ್ರಮುಖ ಗಿರೀಶ್, ಸೋಮವಾರಪೇಟೆ ನಗರ ಅಧ್ಯಕ್ಷ ದರ್ಶನ್, ಎಲ್ಲಾ ವಲಯದ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘಟನೆ ಪ್ರಮುಖರು ಹಾಗೂ ಹಿಂದುಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss