Thursday, July 7, 2022

Latest Posts

ಮತಾಂತರ ವಿರೋಧಿಸಿ ಶನಿವಾರಸಂತೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮಾದಾಪುರ:

ಮಾಲಂಬಿಯ ಮನೆಯೊಂದರಲ್ಲಿ ಮತಾಂತರದಲ್ಲಿ ತೊಡಗಿದ್ದ ಗ್ರಾ.ಪಂ.ಅರೆಕಾಲಿಕ‌ ನೌಕರನನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ, ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಮೂಲೆ ಮೂಲೆಯಿಂದ ಬಂದ ನೂರಾರು ಸಂಖ್ಯೆಯ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಶನಿವಾರಸಂತೆ ಕೆ.ಆರ್.ಸಿ ವೃತ್ತದಿಂದ ಕಂದಾಯ ಇಲಾಖೆಯವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಈ ಸಂದರ್ಭ ಕೆ.ಆರ್.ಸಿ ವೃತ್ತದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಗಣರಾಜ್ ಭಟ್, ಸದ್ದಿಲ್ಲದೆ ಮತಾಂತರ ದಂಧೆ ನಡೆಯುತ್ತಿದೆ. ಬಡವರನ್ನೇ ಗುರಿಯಾಗಿಸಿ ಕ್ರಿಶ್ಚಿಯನ್ ಪಾದ್ರಿಗಳು ಮತಾಂತರದಲ್ಲಿ ತೊಡಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿದವರನ್ನು ಕ್ರಿಶ್ಚಿಯನ್ ಮತಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಜಿಲ್ಲೆಯ, ರಾಜ್ಯದ ಮೂಲೆ ಮೂಲೆಯಲ್ಲು ನಡೆಯಲಿದೆ ಎಂದರು.
ಈಗಾಗಲೇ ಕ್ರಿಶ್ಚಿಯನ್ ಮತಕ್ಕೆ ತೆರಳಿರುವ ಹಿಂದೂಗಳು ಮಾತೃ ಧರ್ಮಕ್ಕೆ ಬರುವವರೆಗೆ ಪ್ರತಿಭಟನೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಎಲಲ್ಲೂ ಸಹ ಈ ರೀತಿಯ ಕೃತ್ಯ ನಡೆಯದಂತೆ ಎಚ್ಚರಿಸಿದರು.
ಕ್ರಿಶ್ಚಿಯನ್ ಧರ್ಮದವರು ಮತಾಂತರದಲ್ಲಿ ತೊಡಗಿದರೆ ಎಸ್.ಡಿ.ಪಿ.ಐ ಸಂಘಟನೆ ಲವ್ ಜಿಹಾದ್, ಗೋಹತ್ಯೆ ಇನ್ನಿತರ ಕೃತ್ಯದಲ್ಲಿ ತೊಡಗಿದೆ. ಇದನ್ನು ಸದೆಬಡಿಯುವ ಕೆಲಸವನ್ನು ಸಹ ಹಿಂದೂ ಜಾಗರಣ ವೇದಿಕೆ ಮಾಡಲಿದೆ. ಕೋಮು ಗಲಭೆಯನ್ನು ಹಿಂದೂ ಸಂಘಟನೆಗಳು ಎಂದೂ ಮಾಡಿಲ್ಲ ಎಂದ ಗಣರಾಜ್ ಭಟ್, ಭಾನುವಾರದ ಮತಾಂತರ ದಂಧೆಗೆ ಕಾರಣಕರ್ತನಾದ ಶನಿವಾರಸಂತೆ ಗ್ರಾ.ಪಂ. ಹಂಗಾಮಿ ನೌಕರನನ್ನು ತಕ್ಷಣದಿಂದಲೇ ವಜಾ ಮಾಡಬೇಕು ಎಂದು ಶನಿವಾರಸಂತೆ ಗ್ರಾ.ಪಂ.ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಪರ ಸಂಘಟನೆಯಿಂದ ಕಂದಾಯ ಇಲಾಖೆಯ ಮೂಲಕ ರಾಜ್ಯಪಾಲರಿಗೆ ಹಾಗೂ ಗ್ರಾಮ ಪಂಚಾಯ್ತಿ ಮತ್ತು ಶನಿವಾರಸಂತೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್, ಹಿಂದೂಪರ ಸಂಘಟನೆಯ ಪ್ರಮುಖರಾದ ಹರೀಶ್, ರಘು, ಮಹೇಶ್, ಧನಂಜಯ್, ಯೋಗಾನಂದ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss