ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ಸರಕಾರದಿಂದ ಹಿಂದೂ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಯುವಕರ ಮೇಲೆ ಕೇಸ್ ಹಾಕಿರೋ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಇವತ್ತು ಮಾತ್ರವಲ್ಲ ಹಿಂದಿನಿಂದಲೂ ಒಂದು ಸಮುದಾಯದ ತುಷ್ಟೀಕರಣ ಮಾಡಿಕೊಂಡು ಬರುತ್ತಿದೆ. ಹಿಂದೂಗಳು, ದಲಿತರೇ ಟಾರ್ಗೆಟ್. ರಾಮನಗರದಲ್ಲಿ ಇಂತಹ ಘಟನೆ ಆಗಿದೆ. ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕೀಯದ ಭಾಗವಾಗಿದೆ ಎಂದು ಕಿಡಿಕಾರಿದ್ದಾರೆ.