ದಾಳಿಗೆ ಪ್ರತ್ಯುತ್ತರ ನೀಡಲು ಹಿಂದೂ ಸಮಾಜ ಸಿದ್ದವಿದೆ: ಶೇಷಗಿರಿ ಕುಲಕರ್ಣಿ ಎಚ್ಚರಿಕೆ

ಹೊಸದಿಗಂತ ವರದಿ, ಕಲಬುರಗಿ:

ದಾರೂಣವಾಗಿ ಕಗ್ಗೊಲೆಯಾದ ಶಿವಮೊಗ್ಗ ನಗರ ಕೋಟೆ ಪ್ರಖಂಡದ ಬಜರಂಗದಳ ಸಂಯೋಜಕ ಶ್ರೀ ಹಷ೯ನ ಹತ್ಯೆ ಖಂಡನೀಯವಾಗಿದ್ದು, ದಾಳಿಗೆ ಪ್ರತ್ಯುತ್ತರ ನೀಡಲು ಹಿಂದೂ ಸಮಾಜ ಸಿದ್ದವಿದೆ ಎಂದು ವಿಶ್ವ ಹಿಂದೂ ಪರಿಷತ್, ನ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶೇಷಗಿರಿ ಕುಲಕರ್ಣಿ ಎಚ್ಚರಿಸಿದರು.

ವಿಶ್ವ ಹಿಂದೂ ಪರಿಷತ್,ಬಜರಂಗದಳ ಕಲಬುರಗಿ ಮಹಾ ನಗರ ಜಿಲ್ಲಾ ವತಿಯಿಂದ ನಗರದ ಚೌಕ ವೃತ್ತದಿಂದ ಜಗತ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ಮಾನವ ಸರಪಳಿ ನಿಮಿ೯ಸಿ, ಜಿಲ್ಲಾಧಿಕಾರಿ ಮೂಲಕ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಧರ್ಮದ ರಕ್ಷಣೆಗೆಂದೆ ಬಾಳನ್ನು ಮುಡಿಪಾಗಿಟ್ಟು ತನ್ನದೆಲ್ಲವನ್ನೂ ಸಮಾಜಕ್ಕೆ ಸಮಪಿ೯ಸಿ ಬಜರಂಗದಳ ದ ಸಕ್ರಿಯ ಕಾಯ೯ಕತ೯ನಾಗಿ ಭಾರತ ಮಾತೇಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದ ಶ್ರೀ ಹಷ೯ ದ್ರೋಹಿಗಳ ಸಂಚಿಗೆ ಬಲಿಯಾಗಿ ಕಗ್ಗೊಲೆಯಾಗಿದ್ದು,ಹಿಂದೂ ಸಮಾಜಕ್ಕೆ ನೋವಿನ ಸಂಗತಿ ಎಂದರು.

ಎಸ್.ಡಿ.ಪಿ.ಐ, ಪಿ.ಎಫ್.ಐ, ನಂತಹ ದೇಶದ್ರೋಹಿ ಸಂಘಟನೆಗಳ ಕೊಲೆಪಾತಕರು ಇಂತಹ ಕಾಯ೯ಕತ೯ರನ್ನೆ ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಾ ಬಂದಿರುವುದು ಹಿಂದೂ ಸಮಾಜಕ್ಕೆ ಎಚ್ಚರಿಕೆ ಘಂಟೆಯಾಗಿದ್ದು,ಕೂಡಲೇ ಇಂತಹ ಭಯೋತ್ಪಾದನೆ ಹುಟ್ಟು ಹಾಕುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಿ ದೇಶದಿಂದಲೇ ನಿರ್ಮೂಲನೆ ಮಾಡಬೇಕು ಎಂದರು.

ಈ ಘಟನೆಯೂ ಸಾಮಾನ್ಯ ಹತ್ಯೆಯಾಗಿರದೇ, ದೇಶಧ್ರೋಹಿ ಸಂಚಿನ ಹತ್ಯೆಯಾಗಿರುವದರಿಂದ ಇದರ ತನಿಖೆಯನ್ನು ಕೇಂದ್ರ ತನಿಖಾದಳಗಳಾದ ಎನ್.ಐ.ಎ ಮತ್ತು ಸಿ.ಬಿ.ಐ,ಗೆ ಒಪ್ಪಿಸಿ ಈ ಹತ್ಯೆಯ ಹಿಂದಿರುವ ಸಮಾಜಘಾತುಕರ ಸಂಚನ್ನು ಬಯಲಿಗೆಳೆದು ಅವರನ್ನು ಕಠಿಣವಾಗಿ ಶಿಕ್ಷಿಸಬೇಕೆಂದು ವಿನಂತಿಸಿದರು. ಹತ್ಯೆಗೊಳಗಾದ 26ರ ಹರೆಯದ ಹಷ೯ನ ಕುಟುಂಬ ಕ್ಕೆ ಕೂಡಲೇ 25 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಗೃಹ ಸಚಿವರಲ್ಲಿ ವಿಶ್ವ ಹಿಂದೂ ಪರಿಷತ್ ಕೇಳಿಕೊಳ್ಳುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ಶ್ರೀಮಂತ ರಾಜು ನವಲದಿ,ಶಿವರಾಜ್ ಸಂಗೋಳಗಿ, ಪ್ರಶಾಂತ್ ಗುಡ್ಡಾ,ಅಶ್ವಿನ್ ಕುಮಾರ್,ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್, ಉಮೇಶ್ ಪಾಟೀಲ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!