ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಜಮ್ಮು ಕಾಶ್ಮೀರದಲ್ಲಿ ಹಿಂದುಗಳನ್ನು ಹತ್ಯೆ ಮಾಡುತ್ತಿರುವ ಭಯೋತ್ಪಾಧಕರ ಕೃತ್ಯವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಹನುಮಂತಪ್ಪ ವೃತ್ತದಲ್ಲಿ ಭಯೋತ್ಪಾಧಕರ ಪ್ರತಿಕೃತಿ ಧಹಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಷ ಹೊರ ಹಾಕಿದರು.
ಈ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಪ್ರತಿದಿನ ಶಾರದೆಯನ್ನು ಸ್ತುತಿಸುತ್ತಾ ಶ್ರೇಷ್ಠ ಭಕ್ತಿ ಪಂಕ್ತಿಗಳೊಂದಿಗೆ ದಿನಗಳು ಆರಂಭವಾಗುತ್ತಿದ್ದವು. ಆದರೆ ಇಂದು ಭಯೋತ್ಪಾಧಕರ ಗುಂಡಿನ ದಾಳಿ, ಬಾಂಬ್ ದಾಳಿಯೊಂದಿಗೆ ದಿನ ಆರಂಭವಾಗುವಂತಾಗಿದೆ. ಮತ್ತೆ ಕಾಶ್ಮೀರದಲ್ಲಿ ೧೯೯೦ ರಲ್ಲಿ ನಡೆದ ಭೀಬತ್ಸ ಕೃತ್ಯಗಳು ಮರುಕಳಿಸುತ್ತಿವೆ. ಹಿಂದುಗಳನ್ನು ಆಯ್ದು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ. ಇದೆಲ್ಲವನ್ನೂ ಗಡಿಯಾಚೆಗಿನ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಸ್ಥಳೀಯ ಮುಸ್ಲಿಮರ ಸಹಯೋಗದೊಂದಿಗೆ ನಡೆಯುತ್ತಿದೆ ಎಂದು ದೂರಿದರು.
ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ ೩೭೦ ಮತ್ತು ೩೫ ಎ ಅನ್ನು ತೆಗೆದುಹಾಕಿದ ನಂತರ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯಿಂದಾಗಿ ಭಯೋತ್ಪಾದಕ ಘಟನೆಗಳಲ್ಲಿ ಹಠಾತ್ ಹೆಚ್ಚಳವಾಗಿದೆ ಎಂದು ದೂರಿದರು.
ಕಳೆದ ಕೆಲವು ದಿನಗಳ ಹಿಂದೆ ಹಿಂದು ದೇವಸ್ಥಾನದ ಒಳಗೆ ನುಗ್ಗಿದ ಭಯೋತ್ಪದಕರು ಅಲ್ಲಿನ ಪೂಜಾರಿಯನ್ನು ಕೊಂದು ಹಾಕಿದರು. ೩ ದಿನದ ಹಿಂದೆ ಆಡಿ ಮಕನೂ ಬಿಂದರ್ ಎಂಬುವರನ್ನ ಕೊಂದು ಹಾಕಿದರು. ಕಾಲೇಜು ಒಳಗೆ ನುಗ್ಗಿದ ಭಯೋತ್ಪದಕರು ಹಿಂದೂ-ಮುಸ್ಲಿಮ್ ಎಂದು ಪ್ರತ್ಯೇಕ ಮಾಡಿ ನಿಲ್ಲಿಸಿ ಹಿಂದೂ ಪ್ರಾಂಶುಪಾಲ ದೀಪಕ್ ಚಂದ್, ಕಾಶ್ಮೀರಿ ಪಂಡಿತ್ ಮತ್ತು ಶಿಕ್ಷಕಿ ಸತಿಂಧರ್ ಕೌರ್ ಅವರನ್ನು ಅಮಾನುಷವಾಗಿ ಗುಂಡಿಟ್ಟು ಕೊಂದಿದ್ದಾರೆ ಎಂದರು.
ಈ ಕೃತ್ಯವನ್ನ ಬಜರಂಗದಳ ಖಂಡಿಸುತ್ತದೆ. ಕಾಶ್ಮೀರದ ಹಿಂದು ಸಮಾಜಕ್ಕೆ ಪರ್ಣ ಬೆಂಬಲ ನೀಡುತ್ತದೆ. ಪಾಕಿಸ್ತಾನ ಮತ್ತು ಸ್ಥಳೀಯ ಭಯೋತ್ಪಾದನೆಯಿಂದಾಗಿ ಇಡಿ ಕಾಶ್ಮೀರ ತತ್ತರಿಸಿಹೋಗಿದೆ ಭಯೋತ್ಪದಕರು ತಮ್ಮ ಅಟ್ಟಹಾಸ ಮೆರೆಯುತ್ತ ಹಿಂದುಗಳನ್ನ ಪಲಾಯನ ಮಾಡವುವಂತೆ ಬೆದರಿಸುವ ಷಡ್ಯಂತ್ರವನ್ನ ಮಾಡಿವೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
೧೯೯೦ ರಿಂದ ತಮ್ಮದೇ ತಾಯಿನೆಲದಲ್ಲಿ ನಿರಾಶ್ರಿತರಾಗಿ ಬದುಕುತಿದ್ದ ಕಾಶ್ಮೀರಿ ಪಂಡಿತರನ್ನ ಮತ್ತೆ ಕಾಶ್ಮೀರಕ್ಕೆ ಕರೆತರುವ ಪ್ರಯತ್ನ ವಿಫಲಗೊಳಿಸುವ ಷಡ್ಯಂತ್ರಕ್ಕೆ ಭಯೋತ್ಪದಕರು ಮುಂದಾಗಿದ್ದಾರೆ. ೮ ಜನರ ಹತ್ಯೆಯ ಹೊಣೆಯನ್ನು ಲಷ್ಕರೆ ತೋಯಿಬಾ ಇಸ್ಲಾಮಿಕ್ ಸಂಘಟನೆ ಹೊಣೆ ಹೊತ್ತಿದ್ದು ಈ ಭಯೋತ್ಪದನೆ ವಿರುದ್ಧ ಜನಜಾಗೃತಿ ಅಗತ್ಯ ಇದ್ದು ಹಿಂದುಗಳು ಜಾತಿ ಮತ ಪಂಥ ಬಿಟ್ಟು ಸಂಘಟಿತನಗಬೇಕು ಎಂದರು.
ವಿಶ್ವ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಜಿಲ್ಲಾ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಅಮಿತ್ ಗೌಡ, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುರು, ನಗರ ಅಧ್ಯಕ್ಷ ದೀಪಕ್, ಇತರೆ ಪದಾಧಿಕಾರಿಗಳಾದ ಶ್ಯಾಮ್ ಗೌಡ, ಮಂಜು ಎಂಜಿ ರೋಡ್, ಸುನಿಲ್ ಆಚಾರ್, ಪ್ರಸಾದ್ ಕೋಟೆ ಇತರರು ಭಾಗವಹಿಸಿದ್ದರು.