ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯವಾಗಿರುವ ಹಿಂದೂ ಧರ್ಮದ ಹುಡುಗಿಯರು ಹಾಗೂ ಮಹಿಳೆಯರ ಬಲವಂತದ ಮತಾಂತರ ಮಾಡಲಾಗುತ್ತಿದ್ದು, ಇದರ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ.
ಪಾಕಿಸ್ತಾನ್ ದಾದಾವರ್ ಇತ್ತೆಹಾದ್ ಮುಂದಾಳತ್ವದಲ್ಲಿ ಪಾಕಿಸ್ತಾನದ ಪ್ರಮುಖ ನಗರ ಕರಾಚಿ ಪ್ರೆಸ್‌ಕ್ಲಬ್‌ನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಯುವತಿಯನ್ನು ಹಾಗೂ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ. ನಂತರ ಮುಸ್ಲಿಂ ಪುರುಷರೊಂದಿಗೆ ಮದುವೆ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧ್ ಪ್ರದೇಶದಲ್ಲಿ ಹಿಂದೂಗಳ ಬಹುದೊಡ್ಡ ಸಮಸ್ಯೆ ಇದಾಗಿದ್ದು, ಪರಿಹಾರ ಬೇಕಿದೆ ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.