ಹಿಂದೂ ರಾಷ್ಟ್ರದಲ್ಲಿ ಹಿಂದುತ್ವ ಬಲಿಷ್ಠವಾಗಬೇಕು: ವಿದ್ಯಾನಂದ ಸರಸ್ವತಿ

ಹೊಸದಿಗಂತ ವರದಿ, ಸೋಮವಾರಪೇಟೆ:
ಹಿಂದೂ ರಾಷ್ಟ್ರದಲ್ಲಿ ಹಿಂದುತ್ವ ಬಲಿಷ್ಠವಾಗಬೇಕು, ಹಿಂದುಗಳ ರಕ್ಷಣೆಯಾಗಬೇಕು ಎಂದು ಅಖಿಲ ಭಾರತ ಸಂತ ಸಮಿತಿಯ ಕರ್ನಾಟಕ ರಾಜ್ಯ ಪ್ರಮುಖ್ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸಂತ ಸಮಿತಿ ವತಿಯಿಂದ ರಾಷ್ಟ್ರವ್ಯಾಪಿ ಮಠಗಳ ಭೇಟಿ, ಸಂತರ ಸಂಘಟನೆ ಅಭಿಯಾನದ ಅಂಗವಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಸೋಮವಾರಪೇಟೆಯಲ್ಲಿ ಅವರು ಮಾತನಾಡಿದರು.
ಹಿಂದುತ್ವದ ನೆಲೆಗಟ್ಟಿನಲ್ಲಿರುವ ನಮ್ಮ ದೇಶದಲ್ಲಿ ಹಿಂದಿನಿಂದಲೂ ಅನ್ಯಧರ್ಮಿಯರ ದಬ್ಬಾಳಿಕೆ ನಡೆಯುತ್ತಿದೆ. ಅದು ಈಗಲೂ ಮುಂದುವರಿದಿದೆ ಆದರೆ ಅವರಿಂದ ಹಿಂದೂ ಧರ್ಮವನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದರು.
ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ತಮ್ಮತ್ತ ಸೆಳೆದು ಅವರ ಜೀವನ ಹಾಗೂ ಜೀವವನ್ನು ಹಾಳು ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದರು.
ಈ ರಾಷ್ಟ್ರದಲ್ಲಿ ಹಿಂದುತ್ವ ಹಾಗೂ ಹಿಂದುಗಳ ರಕ್ಷಣೆಯ ಮಹತ್ತರ ಜವಾಬ್ದಾರಿ ಹೊತ್ತು 1988ರಲ್ಲಿ ಅಖಿಲಭಾರತ ಸಂತ ಸಮಿತಿ ರಚನೆಯಾಗಿದ್ದು ಆಚಾರ್ಯ ಶ್ರೀ ಅವಿಭಲ್ ದಾಸ್ ಜಿ ರಾಷ್ಟ್ರೀಯ ಅಧ್ಯಕ್ಷರಾಗಿ ಮುನ್ನಡೆಸುತ್ತಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ಇದರ ಪ್ರವರ್ತನ ಶಕ್ತಿಪಡಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ಆ‌ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಪ್ರವಾಸ ಕೈಗೊಂಡು ಇಲ್ಲಿರುವ 15 ಮಠಗಳಿಗೂ ಭೇಟಿಯಿತು ಅಲ್ಲಿನ ಪೂಜ್ಯ ಸಂತರನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಳ್ಳಲಾಗುವುದೆಂದರು.
ರಾಜ್ಯದಲ್ಲಿ ಪ್ರತಿ ಜಿಲ್ಲಾ ಮಟ್ಟದ ಸಂತ ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದು ವಿದ್ಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಈ ಸಂದರ್ಭ ಉಡುಪಿಯ ಶ್ರಿ ಸಾಯಿ ಮುಖ್ಯಪ್ರಾಣ ದೇವಾಲಯದ ಶ್ರೀ ಸಾಯಿ ಈಶ್ವರ ಗುರೂಜಿ, ಮಂಗಳೂರಿನ ಚಿಲಿಂಬಿ ಮಠದ ಶ್ರೀ ಮಾತಾ ಶಿವಜ್ಞಾನಮಯೀ, ಸಂತ ಸಮಿತಿಯ ಪ್ರಮುಖರಾದ ವೀರೇಶ್ ಬ ಅಜ್ಜಣ್ಣನವರ್, ಸತೀಶ್ ಹಾಗೂ ಜ್ಞಾನಾನಂದ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!