ಈತನ ದಿನಗೂಲಿ 400 ರೂಪಾಯಿ: ಆದ್ರೆ 14 ಕೋಟಿ ರೂ. .ರಿಟರ್ನ್ಸ್ ಬಾಕಿ ಇದೆ ಎಂದ ಐಟಿ ಅಧಿಕಾರಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೆರಿಗೆ ಕಟ್ಟದೆ ವಂಚಿಸುತ್ತಿರುವ ಕೋಟ್ಯಧಿಪತಿಗಳ ಮನೆಗೆ ಐಟಿ ನೋಟಿಸ್ ನೀಡುವುದು , ದಾಳಿ ಮಾಡುವುದು ಸಹಜ. ಆದ್ರೆ ಇಲ್ಲಿ 400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ಅಧಿಕಾರಿಗಳುದಾಳಿ ನಡೆಸಿದ್ದು, ಮಾತ್ರವಲ್ಲದೆ ಪಾಪ ಅವರಿಂದ 14 ಕೋಟಿ ರೂ.ರಿಟರ್ನ್ಸ್ ಬಾಕಿ ಎಂದು ನೋಟಿಸ್ ಕೂಡ ನೀಡಿದ್ದಾರೆ.

ಹೌದು, ಬಿಹಾರದ ರೋಹ್ಟಸ್ ಜಿಲ್ಲೆಯ ಕರ್ಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಯೇ ನಿವಾಸಿ, ದಿನಗೂಲಿಯಾಗಿ ಕೆಲಸ ಮಾಡುತ್ತಿರುವ ಮನೋಜ್ ಯಾದವ್ ಎಂಬಾತನ ಮನೆಗೆ ಆದಾಯ ತೆರಿಗೆ ಅಧಿಕಾರಿಗಳು, 14 ಕೋಟಿ ರೂ. ರಿಟರ್ನ್ಸ್​ ಬಾಕಿ ಇದೆ ಪಾವತಿಸಿ ಎಂದು ನೋಟಿಸ್ ನೀಡಿದ್ದಾರೆ.

ಇದರಿಂದ ಇಡೀ ಕುಟುಂಬವೇ ಅಚ್ಚರಿಕೊಂಡಿದ್ದು, ಯಾಕೆಂದರೆ ನನ್ನಲ್ಲಿರುವ ಎಲ್ಲ ಆಸ್ತಿಯನ್ನು ಮಾರಿದರೂ 14 ಕೋಟಿ ರೂ. ಆಗುವುದಿಲ್ಲ ಎಂದು ಮನೋಜ್ ಯಾದವ್ ತನ್ನ ಪರಿಸ್ಥಿತಿಯನ್ನು ಹೇಳಿದ್ದು, ಆದ್ರೂ ಐಟಿ ಅಧಿಕಾರಿಗಳು ನಂಬಿಲ್ಲ. ಬ್ಯಾಂಕ್ ದಾಖಲೆಗಳ ಪ್ರಕಾರ ಮನೋಜ್ ಹೆಸರಲ್ಲಿ ಕಂಪನಿಗಳು ನಡೆಯುತ್ತಿದ್ದು, ಅದರ ಬಾಬ್ತು 14 ಕೋಟಿ ರೂ. ತೆರಿಗೆ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದು ಮನೋಜ್​ ಶಾಕ್ ಆಗಿದ್ದಾರೆ.

ಈ ಮೊದಲು ದೆಹಲಿ, ಹರಿಯಾಣ ಹಾಗೂ ಪಂಜಾಬ್​ಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಮನೋಜ್ ಕೆಲಸ ಮಾಡಿದ್ದು, ಕೋವಿಡ್ ಲಾಕ್​ಡೌನ್​ ಹಿನ್ನೆಲೆಯಲ್ಲಿ 2020ರಲ್ಲಿ ಬಿಹಾರಕ್ಕೆ ಮರಳಿ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.

ತಾನು ಹಿಂದೆ ಕೆಲಸ ಮಾಡಿದ್ದ ಕಂಪನಿಗಳವರು ನನ್ನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸಿರಬಹುದು, ಕೆಲಸಕ್ಕೆ ಸೇರುವ ಸಮಯದಲ್ಲಿ ಅವರು ನನ್ನ ಪಾನ್ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಪಡೆದಿದ್ದರು ಎಂಬುದಾಗಿ ಮನೋಜ್ ಹೇಳಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!