ವೃದ್ಧೆಯರೇ ಇವನ ಟಾರ್ಗೆಟ್, ರೇಪ್ ನಂತರ ಕೊಲೆ ಮಾಡ್ತಿದ್ದ ಸೈಕೋ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೃದ್ಧೆಯರೇ ಇವನ ಟಾರ್ಗೆಟ್, ರೇಪ್ ಮಾಡಿದ ನಂತರ ಕೊಲೆ, ಈತನ ವಯಸ್ಸು 20 ವರ್ಷ ಮಾತ್ರ!

ಹೌದು, ಕಳೆದ 50 ದಿನದಲ್ಲಿ ನಾಲ್ವರು ವೃದ್ಧೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ 20 ವರ್ಷದ ಸೈಕೋ ಕಿಲ್ಲರ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆ ಹಾಗೂ ಬಾರಾಬಂಕಿ ಜಿಲ್ಲೆಯ ವೃದ್ಧೆಯರನ್ನು ಈತ ಟಾರ್ಗೆಟ್ ಮಾಡಿಕೊಂಡಿದ್ದ. ಆರೋಪಿ ಅಮರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಉನ್ಹೌನದಲ್ಲಿ ಐದನೇ ವೃದ್ಧೆ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಸ್ಥಳೀಯರು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ಕಾಣಿಸಿದಾಗ ಅತ್ಯಾಚಾರ, ಕೊಲೆ ಮಾಡಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ. ವೃದ್ಧೆಯರ ದೇಹವನ್ನು ಬೆತ್ತಲೆಗೊಳಿಸಿ ಅತ್ಯಾಚಾರ ಎಸಗಿ, ಕುತ್ತಿಗೆ ಹಿಸುಕಿ ಕೊಂದಿದ್ದಾರೆ, ನಾಲ್ವರನ್ನು ಒಂದೇ ರೀತಿ ಹತ್ಯೆ ಮಾಡಿದ್ದು, ತಪ್ಪೊಪ್ಪಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!