ನಾಯಿಗಳ ಮೇಲೆ ಈತನಿಗೆ ಎಲ್ಲಿಲ್ಲದ ಪ್ರೇಮ, ಇದನ್ನು ಸಹಿಸಲಾಗ್ತಿಲ್ಲ ಅಂತಿದ್ದಾರೆ ಹೆಂಡತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈತ ನಾಯಿ ಪೇಮಿ, ಅನಾರೋಗ್ಯಕ್ಕೆ ಒಳಗಾದ, ಕೈಕಾಲು ಇಲ್ಲದ, ಲಕ್ವ ಹೊಡೆದಿರುವ, ಚಲಿಸಲಾಗದೇ ತೆರಳುವ ನಾಯಿಗಳನ್ನು ಕರೆತಂದು ಈತ ಆರೈಕೆ ಮಾಡುತ್ತಾನೆ. ದೇವರು ಎಲ್ಲಾ ಕಡೆ ಇರಲಾಗದೆ ಇಂಥ ಅಪರೂಪದ ವ್ಯಕ್ತಿಗಳನ್ನು ಬಿಟ್ಟುಹೋಗಿರುತ್ತಾನೇನೋ ಅನಿಸುವಷ್ಟು ಪ್ರೀತಿ ವಾತ್ಸಲ್ಯ ನಾಯಿಗಳ ಮೇಲೆ.

ಕಾಲ್‌ಸಂಗ್ ಡೋರ್ಜಿ ಅವರು ವರ್ಷಗಳಿಂದ ನಾಯಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಮಗುವಿನಂತೆ ನಾಯಿಗಳನ್ನು ನೋಡಿಕೊಳ್ಳಲು ಮೈಸೂರು-ಕೊಡಗು ಗಡಿಯಲ್ಲಿರುವ ನಿರಶ್ರಿತರ ಶಿಬಿರದಲ್ಲಿ ಕಾಲ್‌ಸಂಗ್ ಬೀದಿನಾಯಿಗಳಿಗೆ ಆಶ್ರಯ ಕೇಂದ್ರವನ್ನು ತೆರೆದಿದ್ದಾರೆ.

ಇಲ್ಲಿ 40ಕ್ಕೂ ಹೆಚ್ಚು ನಾಯಿಗಳಿವೆ. ಇವು ಅನಾರೋಗ್ಯಕ್ಕೆ ತುತ್ತಾದ ಅಥವಾ ಅನಾಥವಾಗಿದ್ದ ನಾಯಿಗಳು. ಇವುಗಳಿಗೆ ಆಹಾರ, ಔಷಧ, ರಕ್ಷಣೆಯನ್ನು ಡೋರ್ಜಿ ನೀಡುತ್ತಾರೆ.

ಇವರ ಚಿಕಿತ್ಸೆಯಿಂದ ನಾಯಿಗಳ ಆರೋಗ್ಯ ಸುಧಾರಿಸಿದ್ದು, ತದನಂತರ ಇವನ್ನು ಯಾರಿಗಾದರೂ ದಾನ ನೀಡುತ್ತಾರೆ. ಇಲ್ಲಿ ಪ್ರತಿ ನಾಯಿಗೂ ಒಂದೊಂದು ಹೆಸರಿದೆ. ಎಲ್ಲ ಹೆಸರನ್ನೂ ಡೋರ್ಜಿ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ಈ ರೀತಿ ನಾಯಿಯ ಆರೈಕೆಯಲ್ಲೇ ಹೆಚ್ಚು ಸಮಯ ಕಳೆಯುವುದನ್ನು ಕಂಡು ಬೇಸತ್ತ ಡೋರ್ಜಿ ಪತ್ನಿ ಅವರನ್ನು ಬಿಟ್ಟು ಹೋಗಲು ತಯಾರಾಗಿದ್ದಾರಂತೆ! ನಾಯಿಗಳ ಮುಖ ನೋಡಿ ಎಲ್ಲ ಕಷ್ಟವನ್ನು ಮರೆಯುವ ಡೋರ್ಜಿ ನಾಯಿಗಳ ಪ್ರೀತಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!