ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಐಪಿಎಲ್ ಪಂದ್ಯಾವಳಿಗಳು ಒಂದು ವಾರಗಳ ಕಾಲ ರದ್ದು ಮಾಡಲಾಗಿದ್ದು,ಪರಿಸ್ಥಿತಿ ನೋಡಿಕೊಂಡು ಪಂದ್ಯಾವಳಿಯನ್ನು ಮರು ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಬಿಸಿಸಿಐ ಹೇಳಿದೆ.
ಈ ನಡುವೆ ಐಪಿಎಲ್ ಅನ್ನು ನಮ್ಮ ದೇಶದಲ್ಲಿ ಆಡಿಸಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಬಿಸಿಸಿಐಗೆ ಸಲಹೆ ನೀಡಿದ್ದಾರೆ.
ಈ ಕುರಿತು ಮೈಕೆಲ್ ವಾನ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದು, ಬ್ರಿಟನ್‌ನಲ್ಲಿ ಐಪಿಎಲ್ ಪೂರ್ಣಗೊಳಿಸಲು ಸಾಧ್ಯವೇ ಎಂದು ಕೇಳಿದ್ದಾರೆ. ಜೊತೆಗೆ ನಮ್ಮಲ್ಲಿ ಮೈದಾನಗಳೂ ಇವೆ ಮತ್ತು ಈ ಲೀಗ್ ಮುಗಿದ ನಂತರ, ಭಾರತೀಯ ಆಟಗಾರರು ಟೆಸ್ಟ್ ಸರಣಿಗಾಗಿ ಅಲ್ಲಿಯೇ ಉಳಿಯಬಹುದು ಎಂದಿದ್ದಾರೆ. ಆದ್ರೆ, ಇದು ಕೇವಲ ತಮ್ಮ ಕಲ್ಪನೆ ಎಂದು ಕೂಡ ಅವರು ಹೇಳಿದ್ದಾರೆ.
ಇದು ಆಟಗಾರರಿಗೆ ಪ್ರಯೋಜನವನ್ನು ನೀಡುತ್ತದೆ ಏಕೆಂದರೆ ಆಗ ಅವರು ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂದು ಮೈಕೆಲ್ ವಾನ್ ಹೇಳಿ್ದ್ದಾರೆ. ಆದರೆ ವಾನ್ ಅವರ ಸಲಹೆಯನ್ನು ಬಿಸಿಸಿಐ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.