Thursday, August 18, 2022

Latest Posts

ಹೋಳಾ ಹಬ್ಬ: ಭಕ್ತಿಯಿಂದ ಎತ್ತುಗಳ ಪೂಜೆಗೈದ ಸಚಿವರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಬೀದರ್:

ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಸೆಪ್ಟೆಂಬರ್ 6ರಂದು ತಮ್ಮ ಸ್ವಗ್ರಾಮ ಬೋಂತಿ ತಾಂಡಾದಲ್ಲಿ ಹೋಳ ಹಬ್ಬ ಆಚರಿಸಿದರು.
ಗೋಮಾತೆಯನ್ನು ಬಹುವಾಗಿ ಮೆಚ್ಚುವ ಸಚಿವರು, ರೈತರ ಹಬ್ಬವೆಂದೇ ಪ್ರಸಿದ್ದಿ ಪಡೆದ ಹೋಳ ಹಬ್ಬದ ನಿಮಿತ್ತ ಎತ್ತುಗಳಿಗೆ ಭಕ್ತಿ ಭಾವದಿಂದ ಪೂಜೆಗೈದು ನೈವೆದ್ಯ ಸಮರ್ಪಿಸಿದರು.
ಈ ಹಬ್ಬಕ್ಕೆ ಸಚಿವರ ಕುಟುಂಬದ ಬಂಧುಗಳು ಮತ್ತು ರೈತ ಭಾಂದವರು ಸಾಕ್ಷಿಯಾದರು.
ಈ ಹೋಳಾ ಹಬ್ಬದಂದು ರೈತರು ತಮ್ಮ ಎತ್ತುಗಳ ಮೈತೊಳೆದು, ಕೊಂಬುಗಳಿಗೆ ಬಣ್ಣ ಬಳಿದು ಸಿಂಗರಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಓಡಿಸುವುದು ವಾಡಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!