CINEMA| ಜ್ಯೂ.ಎನ್‌ಟಿಆರ್ ಸಿನಿಮಾಗಾಗಿ ಹಾಲಿವುಡ್ ಆಕ್ಷನ್ ಕೊರಿಯೋಗ್ರಾಫರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಯಂಗ್ ಟೈಗರ್ ಎನ್ ಟಿಆರ್ ಮತ್ತು ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಇತ್ತೀಚಿನ ಚಿತ್ರ ಎನ್ ಟಿಆರ್ 30 ಎಂಬ ವರ್ಕಿಂಗ್ ಟೈಟಲ್ ನೊಂದಿಗೆ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಇತ್ತೀಚೆಗೆ ಈ ಸಿನಿಮಾವನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಈ ನಡುವೆ ತಾರಕ್ ಈ ಸಿನಿಮಾ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಲು ರೆಡಿಯಾಗುತ್ತಿದ್ದಾರೆ.

ಚಿತ್ರತಂಡ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಅತ್ಯಂತ ಪ್ರತಿಷ್ಠೆಯಿಂದ ನಿರ್ಮಿಸುತ್ತಿದೆ. ಅದ್ಧೂರಿ ಕಾಸ್ಟಿಂಗ್ ಜೊತೆಗೆ ಹಾಲಿವುಡ್ ತಂತ್ರಜ್ಞರು ಕೂಡ ಈ ಸಿನಿಮಾದಲ್ಲಿ ಸೇರಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಹಾಲಿವುಡ್ ಆ್ಯಕ್ಷನ್ ಕೊರಿಯೋಗ್ರಾಫರ್ ಕೆನ್ನಿ ಬೇಟ್ಸ್ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ನಿರ್ಮಾಪಕರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ವರ್ಕಿಂಗ್ ಸ್ಟಿಲ್ ಮೂಲಕ ಹಂಚಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ತಾರಕ್ ಪಾತ್ರವೇ ಅಲ್ಟಿಮೇಟ್ ಆಗಿರುತ್ತದೆ.. ಈ ಸಿನಿಮಾ ಅವರ ಕೆರಿಯರ್ ನ ಬೆಸ್ಟ್ ಸಿನಿಮಾ ಆಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಅನಿರುದ್ಧ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!