ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರ ಮುಖದ ಅಂದ ಕೆಡಿಸುವ ‘ಡಾರ್ಕ್ ಸರ್ಕಲ್’ಗೆ ಕೊಡಿ ಮನೆಮದ್ದಿನ ಗುದ್ದು!

ಮಹಿಳೆಯರ ಸಾಮಾನ್ಯ ಸಮಸ್ಯೆ ಎಂದರೆ ಡಾರ್ಕ್ ಸರ್ಕಲ್. ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ಕೂಡ ಹೆಚ್ಚುತ್ತಿದೆ. ಈ ಡಾರ್ಕ್ ಸರ್ಕಲ್ ಒಮ್ಮೆ ಬಂದ ಮೇಲೆ ಸಾಧಾರಣವಾಗಿ ಮತ್ತೆ ಹೋಗುವುದಿಲ್ಲ. ಅದಕ್ಕೆ ಮನೆಮದ್ದಿನ ಗುದ್ದೇ ಬೇಕು. ಈ ಕೆಳಗಿನ ಟಿಪ್ಸ್ ಟ್ರೈ ಮಾಡಿ.

ಸೌತೆಕಾಯಿ:
ಸವತೆಕಾಯಿಯನ್ನು ಚಿಕ್ಕ ಚಿಕ್ಕ ಗಾಲಿಗಳನ್ನು ಮಾಡಿ ದಿನದಲ್ಲಿ ಎರಡು ಸಲ ಅರ್ಧ ತಾಸಿನಂತೆ ಕಣ್ಣ ಮೇಲೆ ಇಟ್ಟುಕೊಂಡು ಮಲಗಬೇಕು. ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್‌ ಹೋಗುತ್ತದೆ.

ಆಲುಗಡ್ಡೆ:
ಆಲುಗಡ್ಡೆಯನ್ನು ಚಿಕ್ಕ ಚಿಕ್ಕ ಗಾಲಿಗಳನ್ನು ಮಾಡಿಕೊಂಡು ಅವುಗಳನ್ನು ಕಣ್ಣ ಮೇಲೆ ಇಟ್ಟುಕೊಳ್ಳಬೇಕು. ಹೀಗೆ ವಾರ ಪೂರ್ತಿ ಮಾಡಿದರೂ ಸಾಕು ಡಾರ್ಕ್ ಸರ್ಕಲ್ ಮಾಯವಾಗುತ್ತದೆ.

ವಿಟಮಿನ್ ಇ:
ವಿಟಮಿನ್ ಇ ಎಣ್ಣೆಯನ್ನು ದಿನ ರಾತ್ರಿ ಮಲಗುವಾಗ ಕಣ್ಣಿಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಬೇಕು. ಹೀಗೆ ಒಂದು ತಿಂಗಳು ಮಾಡಿದರೂ ಸಾಕು ಡಾರ್ಕ್ ಸರ್ಕಲ್ ಹೋಗುತ್ತದೆ.

ಕೋಲ್ಡ್ ವಾಟರ್:
ವಿಟಮಿನ್ ಇ ಎಣ್ಣೆಯನ್ನು ಕೋಲ್ಡ ವಾಟರ್‌ನೊಂದಿಗೆ ಸೇರಿಸಿಕೊಂಡು ಹತ್ತಿಯಲ್ಲಿ ನಿಧಾನಕ್ಕೆ ಕಣ್ಣಕೆಳಗೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವುದರಿಂದಲೂ ಡಾರ್ಕ್ ಸರ್ಕಲ್‌ ಹೋಗುತ್ತದೆ. ಇದನ್ನು ದಿನಕ್ಕೆ ಎರಡು ಸಲ ಮಾಡಬೇಕು.

ಅರಿಶಿಣ ಹಾಲು:
ಹಾಲಿಗೆ ಚಿಟಿಕೆಯಷ್ಟು ಅರಿಶಿಣ ಹಾಕಿಕೊಂಡಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ತಣ್ಣಗೆ ಮಾಡಿಕೊಳ್ಳಬೇಕು. ನಂತರ ಹತ್ತಿಯಲ್ಲಿ ಅದನ್ನು ಕಣ್ಣ ಕೆಳಗೆ ಹಚ್ಚಿಕೊಳ್ಳಬೇಕು. ನಿಧಾನಕ್ಕೆ ಹತ್ತಿಯಲ್ಲಿ ಮಸಾಜ್ ಮಾಡಿಕೊಳ್ಳಬೇಕು.

ಕೊಬ್ಬರಿ ಎಣ್ಣೆ:
ಶುದ್ಧ ಕೊಬ್ಬರಿ ಎಣ್ಣೆ, ಆಲೀವ್ ಆಯಲ್ ಮಿಶ್ರಣ ಮಾಡಿಕೊಂಡು ನಂತರ ಅದನ್ನು ಕಣ್ಣಿನ ಕೆಳಗೆ ರಾತ್ರಿ ಮಲಗುವಾಗ ಹಚ್ಚಿಕೊಳ್ಳಬೇಕು. ಇದರಿಂದ ಡಾರ್ಕ್ ಸರ್ಕಲ್ ಹೋಗುತ್ತದೆ. ಆದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss