ಈ ಟಿಪ್ಸ್‌ ಫಾಲೋ ಮಾಡಿದ್ರೆ..ಹಲ್ಲು ನೋವು ಮಂಗಮಾಯ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಲ್ಲುನೋವು, ಯಪ್ಪಾ ಕಷ್ಟ ಕಷ್ಟ. ಆಹಾರ ಸೇವನೆ, ಪಾನೀಯ ಸೇವನೆ, ಮಾತನಾಡಲು ಎಲ್ಲದಕ್ಕೂ ಅಡ್ಡಿ. ಆ ನೋವಿನ ಜೊತೆ ಹತ್ತಾರು ನೋವು ಕಾಣಿಸಿಕೊಳ್ಳುತ್ತವೆ. ಎಲ್ಲದಕ್ಕೂ ಹಲ್ಲು ತೆಗೆಸುವುದು ಪರಿಹಾರವಲ್ಲ, ಕೆಲ ಮನೆ ಮದ್ದುಗಳಿಂದ ಹಲ್ಲು ನೋವನ್ನು ದೂರ ಮಾಡಬಹುದು.

ಕೆಳಗಿನ ಟಿಪ್ಸ್ ಫಾಲೋ ಮಾಡಿ

-ಬೆಳ್ಳುಳ್ಳಿ: ಅಲಿಸಿನ್ ಅಂಶವಿದ್ದು ಇದು ಆ್ಯಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿರುವುದರಿಂದ ಹಲ್ಲು ನೋವಿಗೆ ಪರಿಹಾರ ನೀಡುತ್ತದೆ. ನೀವು ಬೆಳ್ಳುಳ್ಳಿಯನ್ನು ಜಜ್ಜಿ ಉಪ್ಪನ್ನ ಸೇರಿಸಿ ಹಲ್ಲು ನೋವಿರುವ ಕಡೆ ಹಚ್ಚಿದರೆ ಬೇಗ ಪರಿಹಾರ ನೀಡುತ್ತದೆ.

-ಪೇರಲೆ ಎಲೆ:ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವಿದೆ. ಹೀಗಾಗಿ ಇದರ ಎಲೆಯನ್ನು ಅಗೆಯುವುದರಿಂದ ಹಲ್ಲು ನೋವು ಶಮನವಾಗುತ್ತದೆ.

-ಲವಂಗ ಎಣ್ಣೆ: ಆ್ಯಂಟಿ ಇನ್ಫಾಮೇಟರಿ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುವ ಲವಂಗ ಎಣ್ಣೆ ನಿಮ್ಮ ಹಲ್ಲು ನೋವಿಗೆ ಉತ್ತಮ ಪರಿಹಾರ ಎನ್ನಲಾಗುತ್ತದೆ. ಲವಂಗ ಎಣ್ಣೆಯನ್ನು ತೆಗೆದುಕೊಂಡು ಹತ್ತಿಯಲ್ಲಿ ಅದ್ದಿ ನೋವಿರುವ ಸ್ಥಳದಲ್ಲಿ ನಿಧಾನವಾಗಿ ಹಚ್ಚಬೇಕು. ಇದನ್ನ ನಿಯಮಿತವಾಗಿ ಬಳಕೆ ಮಾಡುವುದರಿಂದ ನೋವಿಗೆ ಪರಿಹಾರ ದೊರೆಯುತ್ತದೆ.

-ಟೀ ಬ್ಯಾಗ್‌: ಚಹಾದಲ್ಲಿ ಟ್ಯಾನಿನ್ ಎಂಬ ಅಂಶವಿದ್ದು, ಇದು ನಿಮ್ಮ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ನೀವು ಹಲ್ಲು ನೋವು ಬಂದಾಗ ಟೀ ಬ್ಯಾಗ್ ಕಚ್ಚುವುದರಿಂದ ಬೇಗನೆ ನೋವು ಪರಿಹಾರವಾಗುತ್ತದೆ ಎನ್ನುತ್ತಾರೆ.

-ಪುದೀನಾ: ಇದರಲ್ಲಿ ಮೆಂಥಾಲ್‌ಇದ್ದು, ನೋವು ಇರುವ ಜಾಗಕ್ಕೆ ಪುದೀನಾ ಎಣ್ಣೆ ಹಚ್ಚಿಕೊಳ್ಳವುದರಿಂದು ನೋವು ನಿವಾರಣೆಯಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!