ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಸಮಯದಲ್ಲಿ ಹಿಂಡಿ ಹಿಪ್ಪೆ ಮಾಡುವ ಬೆನ್ನು ನೋವಿಗೆ ಕೊಡಿ ಮನೆಮದ್ದಿನ ಗುದ್ದು…

ಪೀರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಹೆಚ್ಚಾಗಾಗಿ ಬೆನ್ನು ನೋವು, ಕಾಲುನೋವು, ಹೊಟ್ಟೆನೋವು ಬರುತ್ತದೆ. ಅದರಲ್ಲಿ ಬೆನ್ನು ನೋವು ಅನೇಕರಿಗೆ ಬರುವಂತಹದ್ದು. ಪೀರಿಯಡ್ಸ್ ಸಮಯದಲ್ಲಿ ಬರುವ ಬೆನ್ನು ನೋವಿಗೆ ಮಾರುಕಟ್ಟೆಯಲ್ಲಿ ಸಿಗುವ ಗುಳಿಗೆ, ನೋವಿನ ಮುಲಾಮ್ ಹಚ್ಚಿಕೊಳ್ಳುವುದಕ್ಕಿಂತ ಮನೆಮದ್ದು ಟ್ರೈ ಮಾಡುವುದು ಒಳ್ಳೆಯದು. ಇಲ್ಲಿರುವ ಮನೆಮದ್ದುಗಳನ್ನು ಟ್ರೈ ಮಾಡಿ…

ಶಾಖ: ಬೆನ್ನು ನೋವಿಗೆ  ಕೋಲ್ಡ್ ಪ್ಯಾಕ್ ಅಥವಾ ಬಿಸಿ ನೀರಿನ ಶಾಖ ನೀಡುವುದರಿಂದ ನೋವು ಕಡಿಮೆ ಆಗುತ್ತದೆ.

ತೆಂಗಿನ ಎಣ್ಣೆ ಮಸಾಜ್: ತೆಂಗಿನ ಎಣ್ಣೆಯನ್ನು ಉಗುರು ಬಿಸಿ ಮಾಡಿಕೊಂಡು ಅದನ್ನು ಬೆನ್ನಿಗೆ ಹಚ್ಚಿಕೊಂಡು  ಸ್ವಲ್ಪ ಹೊತ್ತು ಮಸಾಜ್ ಮಾಡಿಸಿಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.

ಪೌಷ್ಠಿಕ ಆಹಾರ: ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಒಳಗೊಂಡಿರುವ ಹಣ್ಣು ಹಾಗೂ ತರಕಾರಿಗಳನ್ನು ಪೀರಿಯಡ್ಸ್ ಸಮಯದಲ್ಲಿ ಸೇವಿಸುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.

ವಿಶ್ರಾಂತಿ: ಪೀರಿಯಡ್ಸ್ ವೇಳೆ ಹೆಚ್ಚು ಒತ್ತಡದ ಕೆಲಸ ಹಾಗೂ ಕಚೇರಿ ಕೆಲಸಗಳಲ್ಲಿ ಕುಳಿತು ಕೆಲಸ ಮಾಡುವಬೆನ್ನು ನೋವು ಸಾಮಾನ್ಯವಾಗಿರುತ್ತದೆ. ಈ ವೇಳೆ ಕೆಲ ಹೊತ್ತು ವಿಶ್ರಾಂತಿ ಪಡೆಯುವುದು ಅಗತ್ಯ.

ದಿಂಬು:
ಬೆನ್ನಿಗೆ ಬರುವಂತೆ ದಿಂಬನ್ನು ಇಟ್ಟುಕೊಂಡು ಮಲಗಿದರೆ ಬೆನ್ನುನೋವು ನಿವಾರಣೆಯಾಗುತ್ತದೆ.

ವ್ಯಾಯಾಮ:
ಪೀರಿಯಡ್ಸ್ ಸಮಯದಲ್ಲಿ ಬೆನ್ನು ನೋವಿಗೆ ಮಾಡಬಹುದಾದ ವ್ಯಾಯಾಮವನ್ನು ವೈದ್ಯರ ಸಲಹೆಯ ಮೇರೆಗೆ ಮಾಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss