ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನವಿಡೀ ನಿಮ್ಮ ಬಾಯಿಯಿಂದ ದುರ್ವಾಸನೆ ಬರುತ್ತಾ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ

ಕೆಲವೊಮ್ಮೆ ನಾವೇನು ಸೇವಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಬಾಯಿ ದುರ್ವಾಸನೆಗೆ ಕಾರಣವಾಗುತ್ತದೆ. ಇದರಿಂದ ಎಷ್ಟೋ ಸಲ ನಮಗೆ ತುಂಬಾ ಮುಜುಗರವೂ ಉಂಟಾಗಿದೆ. ಆದರೆ ಇನ್ನು ಮುಂದೆ ಇದರ ಚಿಂತೆ ಬೇಡ..ಈ ಆಹಾರಗಳನ್ನು ಸೇವಿಸುವುದರಿಂದ ದುರ್ವಾಸನೆಯಿಂದ ಪಾರಾಗಬಹುದು

ಕೊತ್ತಂಬರಿ: ಬಾಯಿ ದುರ್ವಾಸನೆ ಬಂದಾಗ ಒಂದೆರಡು ಕೊತ್ತಂಬರಿ ಎಲೆಗಳನ್ನು ಜಗಿದು ಸೇವಿಸುವುದರಿಂದ ವಾಸನೆ ಕಡಿಮೆಯಾಗುತ್ತದೆ.

ಅನಾನಸ್ ಜ್ಯೂಸ್: ಊಟ ಮಾಡಿದ ಬಳಿಕ ಒಂದು ಗ್ಲಾಸ್ ಅನಾನಸ್ ಜ್ಯೂಸ್ ಅಥವಾ ಒಂದೆರಡು ಪೀಸ್ ಹಣ್ಣು ಸೇವಿಸುವುದರಿಂದಲೂ ಬಾಯಿ ದುರ್ವಾಸನೆ ಹೋಗುತ್ತದೆ.

ನೀರು: ಬಾಯಿ ಹೈಡ್ರೇಟ್ ಆಗದೆ ಇದ್ದಾಗ ದುರ್ವಾಸನೆ ಬರುತ್ತದೆ. ಹಾಗಾಗಿ ಸಲೈವಾ ಅಭಿವೃದ್ಧಿ ಪಡಿಸುವಲ್ಲಿ ನೀರು ಸಹಕಾರಿಯಾಗಲಿದೆ.

ಮೊಸರು: ದಿನಕ್ಕೆ ಒಮ್ಮೆಯಾದರೂ ಕೊಬ್ಬು ಇಲ್ಲದ ಮೊಸರು ಸೇವಿಸುವುದರಿಂದ ಬಾಯಿ ದುರ್ವಾಸನೆ ಹೋಗುತ್ತದೆ.

ಹಾಲು: ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಸೇವಿಸಿದ್ದರೆ, ನಂತರ ಒಂದು ಗ್ಲಾಸ್ ಪೂರ್ತಿ ಹಾಲು ಕುಡಿಯುವುದರಿಂದ ಬಾಯಿ ವಾಸನೆ ಬರೋದಿಲ್ಲ.

ಕಿತ್ತಳೆ: ಇದರಲ್ಲಿರುವ ವಿಟಮಿನ್ ಸಿ ಅಂಶವು ಬಾಯಿಯಲ್ಲಿ ಸಲೈವಾ ಅಭಿವೃದ್ಧಿಸಲು ಸಹಕಾರಿಯಾಗಲಿದೆ. ಇದರಿಂದ ದುರ್ವಾಸನೆ ಕಾಡುವುದಿಲ್ಲ.

ಗ್ರೀನ್ ಟೀ: ರಾತ್ರಿ ಗ್ರೀನ್ ಟೀ ತಯಾರಿಸಿ ಫ್ರಿಡ್ಜ್ ನಲ್ಲಿಡಿ. ಬಳಿಕ ನಿಮ್ಮ ಇಡೀ ದಿನದ ಕೆಲಸದ ವೇಳೆ ಈ ಟೀ ಸೇವಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss