Thursday, August 11, 2022

Latest Posts

ಮಕ್ಕಳನ್ನು ಆಗಾಗ ಕಾಡುತ್ತಲೇ ಇರುವ ಜಂತು ಹುಳು ಸಮಸ್ಯೆಗೆ ಈ ಸರಳ ಮನೆಮದ್ದು ಟ್ರೈ ಮಾಡಿ…

ಮಕ್ಕಳಲ್ಲಿ ಜಂತುಹುಳದ ಸಮಸ್ಯೆ ಅಧಿಕವಾಗಿರುತ್ತದೆ. ಮಕ್ಕಳು ಹೆಚ್ಚು ಸಿಹಿ ತಿನ್ನುವುದರಿಂದ ಜಂತು ಹುಳು ಬೇಗ ಆಗುತ್ತದೆ. ಜಂತು ಹುಳು ಹೆಚ್ಚಾದರೆ ಒಂದಿಲ್ಲೊಂದು ಸಮಸ್ಯೆ ಹೆಚ್ಚುತ್ತದೆ. ಕೂದಲು‌ ಉದುರುತ್ತದೆ, ರಾತ್ರಿ ಮಲಗಿದಾಗ‌ ಎಂಜಿಲು ಸುರಿಸುತ್ತಾರೆ, ವೀಕ್ ನೆಸ್ ಪ್ರಾರಂಭವಾಗುತ್ತದೆ. ಹಾಗಾಗಿ ಅಂಥ ಜಂತು ಹುಳು‌ ನಿವಾರಣೆಗೆ ಇಲ್ಲಿದೆ ಮನೆ ಮದ್ದು..

  • ಕಹಿಬೇವು:
    ಕಹಿ ಬೇವಿನ  ರಸವನ್ನು ಒಂದು ಚಮಚ ಆಗುವಷ್ಟು ತೆಗೆದು ಅದಕ್ಕೆ ಜೇನುತುಪ್ಪವನ್ನು ಸೇರಿಸಿಕೊಂಡು ಒಂದು ವಾರ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಇದನ್ನು‌ ಸೇವಿಸಿದರೆ ಜಂತು ಹುಳು‌ನಿವಾಣೆಯಾಗುತ್ತದೆ.
  • ಬೆಳ್ಳುಳ್ಳಿ:
    ಬೆಳ್ಳುಳ್ಳಿ ‌ಹತ್ತು ಎಸಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಅದರ ನೀರನ್ನು‌ ನಿತ್ಯ ಸೇವಿಸಿದರೆ ಜಂತು ಹುಳು‌ ನಿವಾರಣೆಯಾಗುತ್ತದೆ.
  • ಕಂಬಳ ಬೀಜ:
    ಸಿಹಿ‌ ಕುಂಬಳಕಾಯಿ ಬೀಜವನ್ನು‌ ಪುಡಿಮಾಡಿ ಅದನ್ನು‌ ನೀರಿನಲ್ಲಿ ಕುದಿಸಿ ಅದರ ನೀರು ತಣ್ಣಗಾದ ಮೇಲೆ ಕುಡಿಯಬೇಕು.
  • ಬಾಳೆದಿಂಡು
    ಬಾಳೆ ದಿಂಡಿನ್ನು ಉಪ್ಪಿನ ಜೊತೆ ದಿನದಲ್ಲಿ ಒಮ್ಮೆ ಸೇವಿಸುತ್ತಾ ಬಂದರೆ ಜಂತು ಹುಳು ಸಮಸ್ಯೆ ಇರುವುದಿಲ್ಲ.
  • ಜೇಷ್ಠ ‌ಮದ್ದು ಮತ್ತು ಜಾಯಿಕಾಯಿ:
    ಜೇಷ್ಠ ‌ಮದ್ದು ಮತ್ತು ಜಾಯಿಕಾಯನ್ನು ಒಂದು ಚಮಚ ತೇಯ್ದು ಅದನ್ನು‌ ಸೇವಿಸಿ ಬೇಕು. ಇದನ್ನು‌ ಚಿಕ್ಕ ಮಕ್ಕಳಿಗೂ ಕೊಡಬಹುದು.
  • ಗೋ ಮೂತ್ರ:
    ಗೋ‌ ಮೂತ್ರವನ್ನು‌ ನಿತ್ಯ ಒಂದು‌ ಚಮಚ ಸೇವಿಸಿದರೆ ಜಂತು ನಿವಾರಣೆಯಾಗುತ್ತದೆ. ಇದನ್ನು‌ ಒಂದು ವಾರ ಮಾಡಬೇಕು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss