Tuesday, June 28, 2022

Latest Posts

ಪೀರಿಯಡ್ಸ್ ಡೇಟ್ ಹತ್ರಾ ಬರ್ತಿದ್ದ ಹಾಗೆ ಸ್ಕಿನ್ ಆಯ್ಲಿ ಆಗ್ತಿದ್ಯಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ಪೀರಿಯಡ್ಸ್ ಡೇಟ್ ಹತ್ರ ಬರ್ತಿದ್ದ ಹಾಗೇ ಹೆಣ್ಣುಮಕ್ಕಳ ಸಮಸ್ಯೆ ಒಂದಲ್ಲ ಎರಡಲ್ಲ. ಮೊಡವೆ, ವೈಟ್ ಹೆಡ್ಸ್, ಬೆನ್ನು ನೋವು ಇದರ ಜೊತೆ ಆಯ್ಲಿ ಸ್ಕಿನ್ ಸಮಸ್ಯೆ ಬೇರೆ.  ಆದರೆ ಇನ್ಮುಂದೆ ಆಯ್ಲಿ ಸ್ಕಿಕ್ ಸಮಸ್ಯೆ ಬಗ್ಗೆ ಚಿಂತೆ ಬೇಡ. ಮುಖದಲ್ಲಿ ಎಣ್ಣೆ ಅಂಶ ಹೋಗಲು ಈ ಟಿಪ್ಸ್ ಗಳನ್ನು ಟ್ರೈ ಮಾಡಿ..

  • ದಿನದಲ್ಲಿ ಒಮ್ಮೆಯಾದರೂ ಉಗುರು ಬಿಸಿ ಉಪ್ಪು ನೀರಿನಿಂದ ಮುಖ ತೊಳೆಯಿರಿ. ಮುಖದಲ್ಲಿರುವ ಎಣ್ಣೆ ಅಂಶ ಕಡಿಮೆ ಆಗುತ್ತದೆ.
  • ಅತಿಯಾದ ಆಯ್ಲಿ ಸ್ಕಿನ್ ಸಮಸ್ಯೆ ಇರುವವರು ದಿನದಲ್ಲಿ 5 ದಿಂದ 6 ಸಲ ಮುಖ ತೊಳೆಯಿರಿ.  ಅದರಲ್ಲೂ ರಾತ್ರಿ ಮಲಗುವಾಗ ಮಸ್ಟ್ ಆ್ಯಂಟ್ ಶುಡ್ ಮುಖ ತೊಳೆಯಲೇ ಬೇಕು.
  • ನಿಂಬೆ ರಸಕ್ಕೆ ಜೇನುತುಪ್ಪ ಮಿಕ್ಸ್ ಮಾಡಿಕೊಂಡು ವಾರದಲ್ಲಿ ಎರಡು ದಿನ ಹಚ್ಚಿಕೊಳ್ಳಿ. ಕ್ರಮೇಣ ಆಯ್ಲಿ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.
  • ಸೌತೆಕಾಯಿ ಮತ್ತು ಟೋಮಾಟೋವನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಬೇಕು. ಕಾಂತಿ ಕೂಡ ಹೆಚ್ಚುತ್ತದೆ ಜೊತೆಗೆ ಆಯ್ಲಿ ಸ್ಕಿನ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.
  • ವಾರದಲ್ಲಿ ಮೂರರಿಂದ ನಾಲ್ಕು ದಿನ ಕಡಲೆ ಹಿಟ್ಟು ಮತ್ತು ಅರಿಶಿಣವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಉಗುರು ಬಿಸಿ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡಿದರೆ ಮುಖದ ತೈಲ ಅಂಶ ಕಡಿಮೆ ಆಗುವುದು ಪಕ್ಕಾ.
  • ಅಕ್ಕಿ ತೊಳೆದ ನೀರನ್ನು ಇನ್ಮುಂದೆ ವೇಸ್ಟ್ ಮಾಡಬೇಡಿ. ಆ ನೀರನ್ನು ಉಗುರು ಬಿಸಿ ಮಾಡಿಕೊಂಡು ಅದರಲ್ಲಿ ಮುಖವನ್ನು ತೊಳೆಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss