spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶ್… ಗುಪ್ತಾಂಗದಲ್ಲಿ ತುರಿಕೆಯಾಗಿ ಇರಿಟೇಟ್ ಆಗಿದ್ದೀರಾ? ಮನೆಯಲ್ಲಿಯೇ ಈ ರೀತಿ ಮಾಡಿ..

- Advertisement -Nitte

ಮಹಿಳೆಯರಿಗೆ ಪದೇ ಪದೇ ಕಾಡುವ ಸಮಸ್ಯೆ ಎಂದರೆ ಗುಪ್ತಾಂಗ ತುರಿಕೆ, ಪಿರಿಯಡ್ಸ್ ಸಮಯದಲ್ಲಿ ಈ ಸಮಸ್ಯೆ ಉಲ್ಬಣವಾಗುತ್ತದೆ. ಇದನ್ನೂ ಯಾರ ಬಳಿಯಲ್ಲಿಯೂ ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ.  ಅನುಭವಿಸುವುದಕ್ಕೂ ಆಗುವುದಿಲ್ಲ. ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಗುಪ್ತಾಂಗ ತುರಿಕೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳು ಲಭ್ಯವಿದೆ. ಆದರೆ ಅವುಗಳನ್ನು ಬಳಸುವುದಕ್ಕಿಂತ ಮನೆ ಮದ್ದು ಟ್ರೈ ಮಾಡಿ.

  •  ಮೂತ್ರ ಮಾಡಿದ ತಕ್ಷಣ ಉಗುರು ಬಿಸಿ ನೀರಿಗೆ ಉಪ್ಪು ಮತ್ತು ಚಿಟಿಕೆ ಅರಿಶಿಣ ಬೆರೆಸಿಕೊಂಡು ಸ್ವಚ್ಛವಾಗಿ ತೊಳೆದುಕೊಳ್ಳಿ. ಇದರಿಂದ ತುರಿಕೆ ನಿವಾರಣೆಯಾಗುತ್ತದೆ.
  • ಅಡುಗೆ ಸೋಡಾವನ್ನು ಉಗುರು ಬಿಸಿ ನೀರಿಗೆ ಸೇರಿಸಿಕೊಂಡು ದಿನದಲ್ಲಿ 2 ರಿಂದ ಮೂರು ಸಲ ಗುಪ್ತಾಂಗ ತೊಳೆದುಕೊಂಡರೆ ತುರಿಕೆ ಮತ್ತು ವಾಸನೆ ನಿವಾರಣೆಯಾಗುತ್ತದೆ.
  • ಬಾತ್ ಟಬ್ ನಲ್ಲಿ ಬಿಸಿ ನೀರನ್ನು ಹಾಕಿಕೊಂಡು ಅದಕ್ಕೆ ಅಡುಗೆ ಸೋಡಾ ಮತ್ತು ಲಿಂಬು ರಸವನ್ನು ಸ್ವಲ್ಪ ಹಾಕಿಕೊಂಡು  10 ನಿಮಿಷ ಕುಳಿತುಕೊಳ್ಳಿ. ಗುಪ್ತಾಂಗ ತುರಿಕೆ ಜೊತೆಗೆ ಮೂತ್ರದ ಸೋಂಕು ಕೂಡ ನಿವಾರಣೆಯಾಗುತ್ತದೆ.
  • ಎಸಿವಿ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಅರ್ಧ ಕಪ್ ಎಸಿವಿಯನ್ನು ಸ್ನಾನದ ನೀರಿನಲ್ಲಿ ಬೆರೆಸಿಕೊಂಡು ಸ್ನಾನ ಮಾಡಿ.
  • ಕೊಬ್ಬರಿ ಎಣ್ಣೆಯನ್ನು ಅಂಗೈ ಮೇಲೆ ಹಾಕಿಕೊಂಡು, ಬೆರಳುಗಳಿಂದ ಉಜ್ಜಿರಿ. ಎಣ್ಣೆ ಸ್ವಲ್ಪ ಬಿಸಿಯಾಗುತ್ತದೆ. ಆಗ ಅದನ್ನು ಗುಪ್ತಾಂಗಕ್ಕೆ ಹಚ್ಚಿಕೊಳ್ಳಿ. ರಾತ್ರಿ ಒಮ್ಮೆ ಇದನ್ನು ಮಾಡಿದರೂ ಸಾಕು. ತುರಿಕೆ ಕಡಿಮೆ ಆಗುತ್ತದೆ.
  • ಆಕಳು ತುಪ್ಪವನ್ನು ಬಿಸಿ ನೀರಿಗೆ ಹಾಕಿಕೊಂಡು ಮೂತ್ರ ಮಾಡಿದ ನಂತರ ಅದೇ ನೀರಿನಿಂದ ಗುಪ್ತಾಂಗ ತೊಳೆದುಕೊಂಡರೆ ತುರಿಕೆ ಕಡಿಮೆ ಆಗುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss