ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಸಮಯ ಹತ್ರ ಬರ್ತಿದ್ದ ಹಾಗೇ ವೈಟ್ ಹೆಡ್ಸ್ ಜಾಸ್ತಿ ಆಗ್ತಿದ್ಯಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ..

ಪೀರಿಯಡ್ಸ್ ಹತ್ರ ಬರ್ತಿದ್ದಂಗೆ ಹೆಣ್ಣು ಮಕ್ಕಳ ಮುಖ ನೋಡೋದಕ್ಕಾಗಲ್ಲ. ಒಂದು ಕಡೆ ಮೊಡವೆ ಕಾಟ. ಇನ್ನೊಂದು ಕಡೆ ಬ್ಲಾಕ್ ಹೆಡ್ಸ್ ಕಾಟ. ಯಪ್ಪಾ ಯಾವಾಗ ಮುಗಯತ್ತೆ ಈ ಪೀರಿಯಡ್ಸ್ ಅನಸತ್ತೆ. ಇನ್ಮುಂದೆ ಈ ತಲೆ ಬಿಸಿ ಬಿಟ್ಟ ಹಾಕಿ. ವೈಟ್ ಹೆಡ್ಸ್ ಸಮಸ್ಯೆ ನಿವಾರಣೆಗೆ ಈ ಟಿಪ್ಸ್ ಟ್ರೈ ಮಾಡಿ..

  • ಪೀರಿಯಡ್ಸ್ ಹತ್ತಿರ ಬರ್ತಿದ್ದ ಹಾಗೇ ಗ್ರೀನ್ ಟೀ ಸೇವಿಸಿ. ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಗಳು ಮುಖದಲ್ಲಿರುವ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ಮುಖದ ಮೇಲೆ ವೈಟ್ ಹೆಡ್ಸ್ ಆಗುವುದನ್ನು ಕಡಿಮೆ ಮಾಡುತ್ತದೆ.
  • ಮುಖದಲ್ಲಿನ ರಂಧ್ರಗಳನ್ನು ಕಡಿಮೆ ಮಾಡಲು ಮೊಟ್ಟೆಯ ಬಿಳಿ ಭಾಗ ಸಹಾಯ ಮಾಡುತ್ತದೆ. ಜೇನು ತುಪ್ಪದಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಅಂಶವು ತ್ವಚೆಗೆ ಪೋಷಣೆ ನೀಡಿ ವೈಟ್ ಹೆಡ್ಸ್ ಕಡಿಮೆ ಮಾಡುತ್ತದೆ.
  • ಕಡಲೆ ಹಿಟ್ಟು ಕೂಡ ಹೆಡ್ಸ್ ಸಮಸ್ಯೆಗೆ ಬೆಸ್ಟ್. ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ, ನಂತರ ಕೈಯಿಂದ ಉಜ್ಜಿ ಉಜ್ಜಿ ತೊಳೆದರೆ ವೈಟ್ ಹೆಡ್ಸ್ ಕಡಿಮೆ ಆಗುತ್ತದೆ.
  • ಕಾಫಿ ಪುಡಿಗೆ ಹಾಲು,ಮೊಸರು ಹಾಕಿ ಮಿಕ್ಸ್ ಮಾಡಿ ಇದರಲ್ಲಿ ಮುಖವನ್ನು ಸ್ಕ್ರಬ್ ಮಾಡಿದರೆ, ವೈಟ್ ಹೆಡ್ಸ್ ಕಡಿಮೆ ಆಗುತ್ತದೆ.
  • ಬಿಸಿ ಬಿಸಿ ನೀರಲ್ಲಿ ಕಾಟನ್ ಬಟ್ಟೆ ಅದ್ದಿಕೊಂಡು ಅದನ್ನು ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಬೇಕು. ನಂತರ ಕೈಯಿಂದ ಮುಖವನ್ನು ಉಜ್ಜಿಕೊಂಡರೆ ವೈಟ್ ಹೆಡ್ಸ್ ನಿವಾರಣೆಯಾಗುತ್ತದೆ.
  • ರವೆಯನ್ನು ನೀರಲ್ಲಿ ನೆನೆಸಿಟ್ಟು ನಂತರ ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ನಂತರ ಕೈಯಿಂದ ಉಜ್ಜಿ ತೊಳೆದರೆ ಬ್ಲ್ಯಾಕ್, ವೈಟ್ ಹೆಡ್ಸ್ ನಿವಾರಣೆಯಾಗುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss