ಹೊಸದಿಗಂತ ವರದಿ, ಕುಶಾಲನಗರ:
ಈ ಭಾಗದಲ್ಲಿ ಸುರಿದ ಭಾರೀ ಗಾಳಿ ಮಳೆಗೆ ವಾಸದ ಮನೆಯ ಗೋಡೆ ಕುಸಿದ ಘಟನೆ
ಕೂಡುಮಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಡೆಬೆಟ್ಟ ಗ್ರಾಮದ ಹಾಡಿಯಲ್ಲಿ ನಡೆದಿದೆ.
ಹಾಡಿಯ ನಿವಾಸಿ ಕುಮಾರಿ ರಾಮು ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಅತಿಯಾದ ಗಾಳಿ ಮಳೆಯಿಂದಾಗಿ ಕುಸಿದಿದ್ದು, ಭಾರೀ ನಷ್ಟ ಸಂಭವಿಸಿದೆ.
ಸ್ಧಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ರಮೇಶ್ , ಸದಸ್ಯ ದಿನೇಶ್ ,ಕೂಡುಮಂಗಳೂರು ಬಿ ಜೆ ಪಿ ಬೂತ್ ಸಮಿತಿ ಅಧ್ಯಕ್ಷ ಪ್ರಮೀಣ್ ಯುವ ಮೋರ್ಚಾದ ರಾಜು(ಕೂಠಣಿ) ಕೂಡುಮಂಗಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಭೇಟಿ ನೀಡಿ ಪರಿಶೀಲಿಸಿದರು.