Wednesday, June 29, 2022

Latest Posts

ಕಲಬೆರಕೆ ಹೋಮಿಯೋಪಥಿ ಔಷಧಿ ಸೇವಿಸಿ ಒಂದೇ ಕುಟುಂಬದ 8 ಮಂದಿ ದುರ್ಮರಣ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಛತ್ತೀಸಗಢದ ಬಿಲಾಸ್ ಪುರದಲ್ಲಿ ಒಂದೇ ಕುಟುಂಬದವರು ಹೋಮಿಯೋಪಥಿ ವೈದ್ಯರೊಬ್ಬರ ಬಳಿಗೆ ಚಿಕಿತ್ಸೆಗಾಗಿ ತೆರಳಿದ್ದು, ವೈದರು ನೀಡಿದ Drosera 30 ಮಾತ್ರೆ ಸೇವಿಸಿ 8 ಮಂದಿಯೂ ಮೃತಪಟ್ಟಿದ್ದಾರೆ.
ಅಂದಹಾಗೇ ಆ ಹೋಮಿಯೋಪಥಿ ವೈದ್ಯ ನೀಡಿದ್ದಂತ ಮಾತ್ರೆಯಲ್ಲಿ ಶೇ.91ರಷ್ಟು ಕಳ್ಳಭಟ್ಟಿ ಬೆರೆಸಿ ತಯಾರಿಸಿದ ಔಷಧ ಇತ್ತು ಎಂದು ತಿಳಿದು ಬಂದಿದೆ. ಹೀಗೆ ಔಷಧಿ ನೀಡಿದ್ದಂತ ಅಲೋಪತಿ ವೈದ್ಯ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವೈದ್ಯನ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss