Thursday, June 30, 2022

Latest Posts

ಹನಿಟ್ರ್ಯಾಪ್ : ವ್ಯಕ್ತಿ ಮೇಲೆ ಹಲ್ಲೆ ನಡೆಸಿ 30 ಸಾವಿರ ದೋಚಿದ್ದ ಆರೋಪಿಗಳ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮಂಡ್ಯ:

ಹನಿಟ್ರ್ಯಾಪ್ ಮಾಡಿ ವ್ಯಕ್ತಿಗೆ ಹಲ್ಲೆ ನಡೆಸಿ 30 ಸಾವಿರ ರೂ. ದೋಚಿದ್ದ ಮಹಿಳೆ ಸೇರಿದಂತೆ ಐವರನ್ನು ಮಂಡ್ಯ ಗ್ರಾವಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಗುತ್ತಲು ರಸ್ತೆಯ ರವಿಚಂದ್ರ, ಕಾರ್ತಿಕ್, ಕಿರಣ್ ಹಾಗೂ ಚನ್ನಪಟ್ಟಣ ಮೂಲದ ಮಂಜು ಬಂಧಿತರು. ಇವರು ಮಹಿಳೆಯನ್ನು ವ್ಯಕ್ತಿಗೆ ಪರಿಚಯ ಮಾಡಿಕೊಡುವುದು. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹಣ ದೋಚುತ್ತಿದ್ದರೆಂಬ ಆರೋಪವಿದೆ. ಇದೇ ರೀತಿ ಇತ್ತೀಚೆಗೆ ಗಿರೀಶ್ ಎಂಬಾತನ್ನು ಮಹಿಳೆಗೆ ಪರಿಚಯಿಸಿದ್ದಾರೆ.
ಅದೇ ರೀತಿ ಜು.22ರಂದು ರಾತ್ರಿ ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದ ತ್ರಿಪುರಸುಂದರಿ ದೇವಾಲಯದ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಮಹಿಳೆಯೇ ಆತನನ್ನು ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಈ ನಾಲ್ವರು ಆರೋಪಿಗಳು ಅಪರಿಚಿತರಂತೆ ಬಂದು ಗಿರೀಶ್ ಮೇಲೆ ಹಲ್ಲೆ ನಡೆಸಿ 30 ಸಾವಿರ ರೂ. ನಗದು, ಮೊಬೈಲ್ ಹೊಡೆದು ಹಾಕಿ, ಬೈಕ್‌ನ ಕೀಯನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಹಲ್ಲೆಗೊಳಗಾದ ಆತ ಮರುದಿನ ಬೆಳಗ್ಗೆ ಮಂಡ್ಯ ಗ್ರಾವಾಂತರ ಠಾಣೆಗೆ ದೂರು ನೀಡಿದ್ದರು. ಡಿವೈಎಸ್ಪಿ ಮಂಜುನಾಥ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಆನಂದಗೌಡ ನೇತೃತ್ವದ ತಂಡ ಮಂಡ್ಯ ನಗರದಲ್ಲಿಯೇ ಮಹಿಳೆ ಹಾಗೂ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಈ ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss